ರಾಜ್ಯದ ಅತ್ಯಂತ ಹಿರಿಯ ಹುಲಿ ‘ಕೃತಿಕಾ’ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

tiger-01

ಶಿವಮೊಗ್ಗ,ಆ.21-ರಾಜ್ಯದ ಅತ್ಯಂತ ಹಿರಿಯ ಹುಲಿ ಎಂದೇ ಪ್ರಸಿದ್ಧ ಪಡೆದಿದ್ದ ತ್ಯಾವರೆಕೊಪ್ಪದ ಹುಲಿಸಿಂಹಧಾಮದ ಕೃತಿಕಾ (19) ಅನಾರೋಗ್ಯದಿಂದ ಸಾವನ್ನಪ್ಪಿದೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 19 ವರ್ಷದ ಕೃತಿಕಾ ಹುಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದೆ. 10 ಮರಿಗಳಿಗೆ ಜನ್ಮ ನೀಡಿದ್ದ ಕೃತಿಕಾ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿತ್ತು. ಅಲ್ಲದೆ ಸಫಾರಿಯಲ್ಲಿ ಅತ್ಯಂತ ಹಿರಿಯ ಹುಲಿಯಾಗಿದ್ದ ಕೃತಿಕಾ ಸಾವನ್ನಪ್ಪಿರುವುದು ವನ್ಯಧಾಮದಲ್ಲಿ ದುಗುಡ ಮಡುಗಟ್ಟಿದೆ. ಡಿಎಫ್ಒ ಶಿವಶಂಕರ್ ಸ್ಥಳಕ್ಕೆ ಭೇಟಿ ನೀಡಿ, ಪಂಚನಾಮೆ ಮಾಡಿದ್ದಾರೆ.  ಕೃತಿಕಾ ಹುಲಿಸಿಂಹಧಾಮದ ಸಫಾರಿಯಲ್ಲಿಯೇ ಜನಿಸಿ ಸಾವಿರಾರು ಪ್ರಾಣಿಪ್ರಿಯರ ಮೆಚ್ಚುಗೆಯನ್ನು ಗಳಿಸಿಕೊಂಡಿತ್ತು. ಸಹಸ್ರಾರು ಮಂದಿ ಕೃತಿಕಾ ಫೋಟೊಗಳನ್ನೂ ಸೆರೆಹಿಡಿದುಕೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin