ರಾಜ್ಯದ ಇತಿಹಾಸದಲ್ಲಿ ದಾನಿ ಹೆಸರಿನ ಮೊದಲ ಪದವಿ ಕಾಲೇಜು : ಟಿ.ಬಿ.ಜಯಚಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

tb--jayachandra

ಹುಳಿಯಾರು, ಮಾ.6- ರಾಜ್ಯದ ಇತಿಹಾಸದಲ್ಲಿ ಹೋಬಳಿ ಕೇಂದ್ರವೊಂದಲ್ಲಿ ಮೊದಲ ಪದವಿ ಕಾಲೇಜು ಹುಳಿಯಾರಿನಲ್ಲಿ ಆರಂಭವಾಗಿದ್ದು, ಈ ಕಾಲೇಜಿನ ರೂವಾರಿ ಶತಾಯುಷಿ ಟಿ.ಆರ್.ಶ್ರೀನಿವಾಸ ಶೆಟ್ಟರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.ಹುಳಿಯಾರಿನ ಹೆಸರಾಂತ ದಾನಿಗಳಾದ ಟಿ.ಆರ್.ಶ್ರೀನಿವಾಸಶೆಟ್ಟರಿಗೆ ಶತಾಯುಷ್ಯದ ಸಂಭ್ರಮದ ನಿಮಿತ್ತ ವಾಸವಿ ಕಲ್ಯಾಣ ಮಂದಿರಲ್ಲಿ ಏರ್ಪಡಿಸಿದ್ದ ಶತಾಯುಷ್ಯ ಶಾಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕೆಂಕೆರೆಯ ಬಸಪ್ಪ, ಮರುಳಪ್ಪ ಅವರಿಂದಲೂ ದಾನ ಕೊಡಿಸುತ್ತೇನೆಂದು ಹೇಳಿ ಅದರಂತೆ ನಡೆದುಕೊಂಡರು. ಹಾಗಾಗಿಯೇ ಈ ಮೂವರ ಭೂದಾನದಿಂದ ಇಂದು ಹುಳಿಯಾರಿಗೆ ಪದವಿ ಕಾಲೇಜಾಗಿದ್ದು ಈ ಕಾಲೇಜಿಗೆ ಬಸಪ್ಪ, ಮರುಳಪ್ಪ, ಶ್ರೀನಿವಾಸಶೆಟ್ಟಿ (ಬಿಎಂಎಸ್) ಕಾಲೇಜೆಂದು ರಾಜ್ಯದಲ್ಲೇ ಮೊದಲ ಬಾರಿಗೆ ಸರ್ಕಾರಿ ಕಾಲೇಜಿಗೆ ದಾನಿಗಳ ಹೆಸರಿಟ್ಟು ಕೃತಜ್ಞತೆ ಅರ್ಪಿಸಿದ್ದೇನೆ ಎಂದರು.

ಈ ಮಟ್ಟಿಗೆ ದಾನಧರ್ಮದಲ್ಲಿ ತೊಡಗಿರುವ ಇವರ ಸೇವಾಗುಣ ಇತರರಿಗೆ ಮಾದರಿ. ಹಣವಂತರು ಇವರಂತೆ ದಾನಧರ್ಮದಲ್ಲಿ ತೊಡಗಿಕೊಳ್ಳುವುದು ಒಳಿತು ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ ವೈ.ಸಿ.ಸಿದ್ಧರಾಮಯ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶೇಷಾನಾಯ್ಕ, ಬಗರ್‍ಹುಕುಂ ಕಮಿಟಿ ಸದಸ್ಯ ಎಚ್.ಅಶೋಕ್, ಪಿಎಲ್‍ಡಿ ಬ್ಯಾಂಕ್ ನಿರ್ದೆಶಕ ಕೆಂಕೆರೆಶಿವಕುಮಾರ್, ಹುಳಿಯಾರು ಟೌನ್ ಬ್ಯಾಂಕ್ ಅಧ್ಯಕ್ಷ ದೇವಾನಂದ್, ಆರ್ಯವೈಶ್ಯದ ಮಂಡಳಿದ ಎಂಎಸ್‍ಆರ್ ನಟರಾಜ್, ಎಲ್.ಆರ್.ಚಂದ್ರಶೇಖರ್, ಶ್ರೀನಿವಾಸಮೂರ್ತಿ, ಎಸ್‍ಎಲ್‍ಆರ್ ಪ್ರದೀಪ್, ನಾಗೇಶ್, ವೇಣು, ಕೋರಿಯರ್ ರಮೇಶ್, ಅಜಯ್ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin