ರಾಜ್ಯದ ಇಬ್ಬರಿಗೆ ಲಕ್ಕಿ ಗ್ರಾಹಕ್ ಯೋಜನೆ ಲಾಟರಿ ಬಹುಮಾನ

ಈ ಸುದ್ದಿಯನ್ನು ಶೇರ್ ಮಾಡಿ

Licky-Grahak

ಬೆಂಗಳೂರು, ಡಿ.31-ನಗದು ರಹಿತ ಮತ್ತು ಆನ್‍ಲೈನ್ ವಹಿವಾಟಿಗೆ ಉತ್ತೇಜನ ನೀಡಲು ಪ್ರಧಾನಿ ನರೇಂಧ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಲಕ್ಕಿ ಗ್ರಾಹಕ್ ಯೋಜನೆಯ 15,000 ವಿಜೇತರಲ್ಲಿ ರಾಜ್ಯದ ಇಬ್ಬರು ಅದೃಷ್ಟಶಾಲಿಗಳಿಗೆ ತಲಾ 1,000 ರೂ. ನಗದು ಬಹುಮಾನ ಲಭಿಸಿದೆ.   ಬೆಂಗಳೂರಿನ ಜಯದೇವ ಆಸ್ಪತ್ರೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ರಮಾ ಸುರೇಶ್ ಮತ್ತು ತುಮಕೂರಿನ ಬಿಷಪ್ ಸಾರ್ಜೆಂಟ್ ಪಿಯು ಕಾಲೇಜಿನ ಉಪನ್ಯಾಸಕಿ ಬಿ. ಮರ್ಲಿನ್ ರಾಜ್ಯದ ಇಬ್ಬರು ಬಹುಮಾನ ವಿಜೇತರಾಗಿದ್ದಾರೆ.
ರಮಾ ಅವರು ಪಾದರಕ್ಷೆ ಖರೀದಿಸಲು ತಮ್ಮ ಡೆಬಿಟ್ ಕಾರ್ಡ್ ಬಳಸಿದ್ದರೆ, ಮರ್ಲಿನ್ ತಮ್ಮ ಸೋದರಿಗಾಗಿ ವಸ್ತು ಕೊಳ್ಳಲು ಕಾರ್ಡ್ ಉಪಯೋಗಿದ್ದರು.

ಇಬ್ಬರಿಬ್ಬರೂ ಕೆನರಾ ಬ್ಯಾಂಕ್ ಗ್ರಾಹಕರು. ಇವರ ಮೊಬೈಲ್ ಫೋನ್‍ಗಳಿಗೆ ಲಕ್ಕಿ ಗ್ರಾಹಕ್ ಯೋಜನೆಯ ಲಾಟರಿ ಬಹುಮಾನದ ಸಂದೇಶ ಬಂದಾಗ ನಂಬಲಿಲ್ಲ. ಆದರೆ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ತಲಾ 1,000 ರೂ. ಹೆಚ್ಚಳ ಮೊತ್ತ ಇತ್ತು. ತಮಗೆ ಈ ಯೋಜನೆಯ ಫಲಾನುಭವ ಲಭಿಸಿರುವುದಕ್ಕೆ ಇವರಿಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ.
ಡಿ.26ರಿಂದ ಜರಿಗೆ ಬಂದಿರುವ ಲಕ್ಕಿ ಗ್ರಾಹಕ್ ಯೋಜನೆ ಏಪ್ರಿಲ್ 14ರವರೆಗೆ ಮುಂದುವರಿಯಲಿದ್ದು, ಒಟ್ಟು 15,000 ಅದೃಷ್ಟಶಾಲಿಗಳಿಗೆ ತಲಾ 1,000 ರೂ. ನಗದು ಬಹುಮಾತನ ಲಭಿಸಲಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin