ರಾಜ್ಯದ ಒಳಿಗಾಗಿ ಸ್ವಂತ ಖರ್ಚಿನಲ್ಲಿ ಪೂಜೆ ಮಾಡಿಸಿದ್ದೇನೆ, ಮೌಢ್ಯದಿಂದಲ್ಲ : ಎಂ.ಬಿ.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

MB-Patil--Session

ಬೆಂಗಳೂರು,ಜೂ.7-ನಾನು ಮಳೆಗಾಗಿ ಯಾವುದೇ ಹೋಮ-ಹವನ ಮಾಡಿಲ್ಲ. ಸ್ವಂತ ಖರ್ಚಿನಲ್ಲಿ ರಾಜ್ಯದ ಜನರ ಒಳಿತಿಗಾಗಿ ಪೂಜೆ ಮಾಡಿಸಿದ್ದೇನೆ. ಇದನ್ನು ಮೌಢ್ಯ ಎಂದು ವಾದಿಸುವವರಿಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ವಿಧಾನಸಭೆ ಅಧಿವೇಶನದಲ್ಲಿ ಸ್ವಯಂ ಪ್ರೇರಿತರಾಗಿ ಹೇಳಿಕೆ ನೀಡಿದ ಅವರು, ಕಾವೇರಿ ಮತ್ತು ಕೃಷ್ಣೆಯ ಉಗಮ ಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದೇನೆ. ಅದಕ್ಕೆ ತಗಲುವ ವೆಚ್ಚವನ್ನು ನಾನು ಮತ್ತು ನನ್ನ ಸ್ನೇಹಿತರು ಭರಿಸಿದ್ದೇವೆ. ಸರ್ಕಾರದ ಹಣ ಖರ್ಚು ಮಾಡಿಲ್ಲ. ಕಾವೇರಿ ಉಗಮ ಸ್ಥಾನದಲ್ಲಿ ನಡೆದ ಪೂಜೆಗೆ ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಗಮಿಸಿದ್ದರು ಎಂದರು.ಉತ್ತರ ಕರ್ನಾಟಕದಲ್ಲಿ ಪ್ರತಿ ಎಳ್ಳ ಅಮಾವಾಸ್ಯೆ ದಿನದಂದು ಭೂ ತಾಯಿಯನ್ನು ಸ್ಮರಿಸುವ ಪೂಜೆ ಮಾಡಿಸುತ್ತಾರೆ. ಕಾವೇರಿ, ಕೃಷ್ಣೆಯಂತಹ ನದಿಗಳು ತುಂಬಿದಾಗ ಬಾಗಿನ ಅರ್ಪಿಸುವ ಸಂಪ್ರದಾಯ ನಮ್ಮಲ್ಲಿದೆ. ಇದನ್ನು ಮೂಢನಂಬಿಕೆ ಎನ್ನಲು ಸಾಧ್ಯವೇ ಎಂದು ಪ್ರಶ್ನಿಸಿದರು.   ಈ ಮೊದಲು ರ್ಯಾದಲ್ಲಿ ಮುಜರಾಯಿ ಇಲಾಖೆಯಿಂದ ಮಳೆಗಾಗಿ ಪ್ರಾರ್ಥಿಸಿ ಮಾಡಲಾಗಿರುವ ಪೂಜೆ, ಯಜ್ಞ , ಯಾಗಾದಿಗಳ ಮಾಹಿತಿ ಹಾಗೂ ಸೂರ್ಯಗ್ರಹಣ ಶಾಂತಿಯ ವೆಚ್ಚ ಸೇರಿದಂತೆ ಹಲವಾರು ಪ್ರಸಂಗ ಉಲ್ಲೇಖಿಸಿದ ಎಂ.ಬಿ.ಪಾಟೀಲ್ ಅವರು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಹಲವಾರು ಶಾಂತಿ ಮಾಡಿಸಿ ನೂರಾರು ಕೋಟಿ ವೆಚ್ಚ ಮಾಡಲಾಗಿದೆ ಎಂದು ಟೀಕಿಸಿದರು.

ನಾನು ರಾಜ್ಯದ ಜನರ ಒಳತಿಗಾಗಿ ಸ್ವಂತ ಖರ್ಚಿನಲ್ಲಿ ಪೂಜೆ ಮಾಡಿಸಿದ್ದೇನೆ. ಇದು ಮೂಢನಂಬಿಕೆ ವ್ಯಾಪ್ತಿಗೆ ಬರುವುದಿಲ್ಲ. ನಾನೇನು ಬುದ್ದಿಜೀವಿಯಲ್ಲ ನನಗೂ ನಂಬಿಕೆಗಳಿವೆ. ನಾನು ಮಾಡಿಸಿದ ಪೂಜೆಗೆ ಅಪಾರ್ಥ ಪೂಜೆಗೆ ಅಪಾರ್ಥ ಕಲ್ಪಿಸಿ ಅಪಪ್ರಚಾರ ಮಾಡುತ್ತಿರುವ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದರು. ನಮ್ಮ ಪದ್ದತಿಯಲ್ಲಿ ನದಿಗಳನ್ನು ಪೂಜಿಸುವ ಸಂಪ್ರದಾಯವಿದೆ. ಇದನ್ನು ತಪ್ಪು ಎನ್ನುವುದಾದರೆ ನಾನು ಲಕ್ಷ ಬಾರಿಯಾದರೂ ಪೂಜೆ ಮಾಡಿಸಲು ಸಿದ್ದ ಎಂದು ಸವಾಲು ಹಾಕಿದರು.


ಎಂ.ಬಿ.ಪಾಟೀಲ್ ಅವರು ಸ್ವಯಂಪ್ರೇರಿತ ಹೇಳಿಕೆ ನೀಡಿದ ನಂತರ ಚರ್ಚೆಗೆ ಅವಕಾಶ ನಿರಾಕರಿಸಲಾಯಿತು. ಈ ವೇಳೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವಕಾಶ ನಿರಾಕರಿಸಿದ್ದೀರಿ, ಸಚಿವರು ಹೇಳಿದ್ದನೇ ಕೇಳಿಕೊಂಡು ಸುಮ್ಮನೆ ಕೂರಬೇಕೆ ಎಂದು ಕಿಡಿಕಾರಿದರಲ್ಲದೆ ಈಗಲಾದರೂ ಹಿಂದು ಧರ್ಮ ಆಚರಣೆಗೆ ಒಪ್ಪಿಕೊಂಡಿದ್ದೀರಲ್ಲ , ನಮ್ಮ ಹಾದಿಗೆ ಬರುತ್ತಿದ್ದೀರಿ ಎಂದು ಕಿಚಾಯಿಸಿದರು.   ಇದಕ್ಕೆ ವಿರೋಧ ವ್ಯಕ್ತಪಡಿಸಿದ ಎಂ.ಬಿ.ಪಾಟೀಲ್, ನನ್ನ ನಂಬಿಕೆ ಬೇರೆ, ಮೂಢನಂಬಿಕೆ ಬೇರೆ. ನಾನು ನಿಮ್ಮ ಹಾದಿಯಲ್ಲಿ ಸಾಗುತ್ತಿಲ್ಲ ಎಂದು ತಿರುಗೇಟು ನೀಡಿದರು. ಈ ಹಂತದಲ್ಲಿ ಎಂ.ಪಿ.ಪಾಟೀಲ್ ಹಾಗೂ ಜಗದೀಶ್ ಶೆಟ್ಟರ್ ನಡುವೆ ಮಾತಿನ ಚಕಮಕಿ ನಡೆಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin