ರಾಜ್ಯದ ಕೆರೆಗಳ ಡಿ-ನೋಟಿಫೈಗೆ ಕೇಂದ್ರ ವಿರೋಧ

ಈ ಸುದ್ದಿಯನ್ನು ಶೇರ್ ಮಾಡಿ

Uma-Bharathi--01

ನವದೆಹಲಿ, ಆ.11-ಕರ್ನಾಟಕದ ಕೆರೆಗಳನ್ನು ಡಿ-ನೋಟಿಫೈ ಮಾಡುವ ವಿಷಯ ಕುರಿತಂತೆ ಕೇಂದ್ರ ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ತಿಳಿಸಿದ್ದಾರೆ. ಈ ಮೂಲಕ ಕರ್ನಾಟಕ ರಾಜ್ಯದಲ್ಲಿನ ಕೆರೆಗಳ ಡಿ-ನೋಟಿಫೈಗೆ ಕೇಂದ್ರ ಸರ್ಕಾರದ ವಿರೋಧವಿದೆ ಎಂಬುದನ್ನು ತಿಳಿಸಿದ್ದಾರೆ. ಲೋಕಸಭೆಯಲ್ಲಿ ಇಂದು ಪ್ರಶ್ನೋತ್ತರ ಕಲಾಪದಲ್ಲಿ ಈ ಸಂಬಂಧ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕ ರಾಜ್ಯದ 1,600ಕ್ಕೂ ಹೆಚ್ಚು ಕೆರೆಗಳ ಡಿ-ನೋಟಿಫೈ ವಿಚಾರ ಸರ್ಕಾರದ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದರೆ ಅದಕ್ಕೆ ಸಂಬಂಧಪಟ್ಟ ವರದಿಯನ್ನು ಕೇಳುತ್ತೇವೆ ಎಂದು ಹೇಳಿದರು.

ಕೆರೆಗಳನ್ನು ಡಿ-ನೋಟಿಫೈ ಮಾಡುವುದಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಸರ್ಕಾರದಿಂದ ಯಾವುದೇ ಮಾಹಿತಿಯೂ ಸರ್ಕಾರಕ್ಕೆ ಇಲ್ಲ. ಈ ಕುರಿತ ಪ್ರಸ್ತಾವವೂ ಬಂದಿಲ್ಲ. ಹೀಗಾಗಿ ಕರ್ನಾಟಕ ಸೇರಿದಂತೆ ದೇಶದ ಯಾವುದೇ ಕೆರೆಗಳನ್ನು ಡಿ-ನೋಟಿಫೈ ಮಾಡುವ ವಿಷಯ ಕುರಿತು ನಿರ್ಧಾರ ಕೈಗೊಳ್ಳುವ ವಿಷಯ ಉದ್ಬವಿಸಿಲ್ಲ ಎಂದು ಉಮಾಭಾರತಿ ಹೇಳಿದರು.

ಒಂದು ವೇಳೆ ಕರ್ನಾಟಕವು ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿದರೆ ಅದನ್ನು ಪರಿಗಣಿಸಬಹುದಾದ ಸಾಧ್ಯಾ ಸಾಧ್ಯತೆ ಕುರಿತು ವರದಿಗಳನ್ನು ಪಡೆದ ನಂತರವಷ್ಟೇ ಈ ಕುರಿತು ಮುಂದಿನ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಜಲಸಂಪನ್ಮೂಲ ಸಚಿವರು ಸ್ಪಷ್ಟಪಡಿಸಿದರು. ಸಚಿವರ ಹೇಳಿಕೆಯೊಂದಿಗೆ ಸದ್ಯಕ್ಕೆ ಕೆರೆಗಳ ಡಿ-ನೋಟಿಫೈಗೆ ಅವಕಾಶ ಇಲ್ಲ ಎಂಬುದು ಸ್ಪಷ್ಟವಾಗಿದೆ.

Facebook Comments

Sri Raghav

Admin