ರಾಜ್ಯದ ಖಾಸಗಿ ವಲಯದ ಎಲ್ಲಾ ಚಾಲಕರಿಗೂ ವಿಮೆ

ಈ ಸುದ್ದಿಯನ್ನು ಶೇರ್ ಮಾಡಿ

Drivers

ಬಳ್ಳಾರಿ,ಆ.15– ರಾಜ್ಯದ ಖಾಸಗಿ ವಲಯದ ಎಲ್ಲಾ ಚಾಲಕರಿಗೆ ಕಾರ್ಮಿಕ ಇಲಾಖೆ ವತಿಯಿಂದ ವಿಶೇಷ ವಿಮೆ ಜಾರಿ ಮಾಡಲಾಗುವುದು ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು. ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡ ಖಾಸಗಿ ವಲಯದ ಚಾಲಕರಿಗೂ ಈ ಯೋಜನೆ ಅನ್ವಯ ವಿಮೆ ಜಾರಿಯಾಗಲಿದೆ ಎಂದರು. ಈ ಸಂಬಂಧ ಸಾರಿಗೆ ಇಲಾಖೆಯಿಂದ ಮಾಹಿತಿ ಪಡೆದಿದ್ದು, ಅದರ ಆಧಾರದಲ್ಲಿ ಚಾಲಕರಿಗೆ ವಿಮೆ ನೀಡಲಾಗುತ್ತದೆ ಎಂದು ವಿವರಿಸಿದರು.
ತುಂಗಭದ್ರಾ ಜಲಾಶಯದಲ್ಲಿ ಕಡಿಮೆ ಪ್ರಮಾಣದ ನೀರು ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಮುನಿರಾ ಬಾದ್‍ನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಲಾಗುವುದು. ವರ್ಷದ ಮೊದಲ ಹಂಗಾಮಿನ ಬೆಳೆಗೆ ನೀರು ಪೂರೈಸುವುದು ಸೇರಿದಂತೆ ಅಗತ್ಯವಿರುವ ನೀರಿನ ಪ್ರಮಾಣ ಇನ್ನಿತರ ವಿಷಯ ಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

► Follow us on –  Facebook / Twitter  / Google+

Facebook Comments

Sri Raghav

Admin