ರಾಜ್ಯಪಾಲರ ಹುದ್ದೆ ಬಗ್ಗೆ ಆಸಕ್ತಿ ಇದೆ : ಡಿ.ಎಚ್.ಶಂಕರಮೂರ್ತಿ

ಈ ಸುದ್ದಿಯನ್ನು ಶೇರ್ ಮಾಡಿ

D.H.-ShankarMurthy-DHS

ಬೆಂಗಳೂರು,ಮೇ 22 – ರಾಜ್ಯಪಾಲರ ಹುದ್ದೆಯ ಬಗ್ಗೆ ಆಸಕ್ತಿ ಇದ್ದು ಬಿಜೆಪಿ ಹೈಕಮಾಂಡ್ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ತಿಳಿಸಿದ್ದಾರೆ.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನೀಡಿದ ಎಲ್ಲಾ ಹುದ್ದೆಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿದ್ದೇನೆ ಎಂದು ಹೇಳಿದರು.  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನಡುವೆ ಗೊಂದಲ ವಿಚಾರದಲ್ಲಿ ತಾವು ಅಸಹಾಯಕರಾಗಿರುವುದಾಗಿ ತಿಳಿಸಿದರು. ಸಭಾಪತಿ ಹುದ್ದೆಯಲ್ಲಿರುವುದರಿಂದ ರಾಜಕೀಯ ವಿಷಯ ಮಾತನಾಡುವಂತಿಲ್ಲ. ಆದರೂ ಜನಸಂಘ ಕಾಲದಿಂದಲೂ ಇರುವ ವ್ಯಕ್ತಿ ಆಗಿರುವುದರಿಂದ ಸಲಹೆ ಪಡೆಯುತ್ತಾರೆ. ಈ ವಿಚಾರದಲ್ಲಿ ನನಗೆ ನಾನು ನಿಬಂಧನೆ ಹಾಕಿಕೊಂಡಿದ್ದೇನೆ ಎಂದರು.ವಿಧಾನಸೌಧದ ಮೊದಲ ಮಹಡಿ ಸಚಿವಾಲಯಕ್ಕೆ ಬಿಟ್ಟು ಕೊಡಬೇಕೆಂಬ ವಿವಾದ ಆಗಬಾರದಿತ್ತು. ಶಾಸಕರ ಭವನಕ್ಕೆ ಕಂದಯ ಕಟ್ಟುವುದು ಸಚಿವಾಲಯವಾದರೂ ಅದರ ಮಾಲೀಕತ್ವ ಲೋಕೋಪಯೋಗಿ ಇಲಾಖೆಗೆ ಸೇರಿದೆ. ಈ ವಿಚಾರದಲ್ಲಿ ಗೊಂದಲ ಬೇಡ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮಾತುಕತೆ ನಡೆಸಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin