ರಾಜ್ಯಸಭೆ ಕಲಾಪ 3 ಬಾರಿ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Rajy-Sabha

ನವದೆಹಲಿ, ಆ.11- ಉತ್ತರಪ್ರದೇಶಕ್ಕೆ ಹಣ ಬಿಡುಗಡೆ ಮಾಡುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಸಮಾಜವಾದಿ ಪಕ್ಷದ ಸದಸ್ಯರು ಭಾರೀ ಪ್ರತಿಭಟನೆ ನಡೆಸಿದ ಕಾರಣ ಇಂದು ರಾಜ್ಯಸಭೆ ಕಲಾಪವನ್ನು ಮೂರು ಬಾರಿ ಮುಂದೂಡಲಾಯಿತು.  ಸಂಸತ್ತಿನ ಮೇಲ್ಮನೆಯಲ್ಲಿ ಕಲಾಪ ಆರಂಭವಾದ ಸ್ವಲ್ಪ ಹೊತ್ತಿನಲ್ಲೇ ಈ ವಿಷಯ ಪ್ರಸ್ತಾಪಿಸಿದ ಎಸ್‍ಪಿ ಸದಸ್ಯರು ಸಭಾಪತಿಯವರ ಪೀಠದ ಮುಂದಿರುವ ಸ್ಥಳಕ್ಕೆ ಆಗಮಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಕೂಡಲೇ ಉತ್ತರ ಪ್ರದೇಶದ ಪಾಲಿನ ಹಣವನ್ನು ಮಂಜೂರು ಮಾಡಬೇಕೆಂದು ಆಗ್ರಹಿಸಿದರು.  ಜೆಡಿಯು ಸದಸ್ಯರೂ ಕೂಡ ಪ್ರತಿಭಟನೆ ನಡೆಸಿ, ಪ್ರವಾಹ ಪೀಡಿತ ಬಿಹಾರದಲ್ಲಿ ಕೃಷಿ ಬೆಳೆ ವಿಮಾ ಯೋಜನೆಯಾದ ಪ್ರಧಾನಮಂತ್ರಿ ಕೃಷಿ ವಿಮಾ ಯೋಜನೆಯನ್ನು ಕೇಂದ್ರ ಅನುಷ್ಠಾನಗೊಳಿಸಿಲ್ಲ ಎಂದು ಆಪಾದಿಸಿದರು.

ಸದನದಲ್ಲಿ ಆಯೋಮಯ ಪರಿಸ್ಥಿತಿ ತಲೆದೋರಿದ್ದರಿಂದ  ಉಪಸಭಾಪತಿ ಪಿ.ಜೆ.ಕುರಿಯನ್ ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಿದರು. ಮತ್ತೆ ಸದನ ಸಮಾವೇಶಗೊಂಡಾಗ ಕೋಲಾಹಲದ ವಾತಾವರಣ ಸೃಷ್ಟಿಯಾಯಿತು. ಪುನಃ ಕಲಾಪವನ್ನು ಮುಂದಕ್ಕೆ ಹಾಕಿದರು. ಇದಾದ ಬಳಿಕ ಇದೇ ಸ್ಥಿತಿ ಮುಂದುವರಿದಿದ್ದರಿಂದ ಮೂರನೇ ಬಾರಿಯೂ ಸದನವನ್ನು ಮುಂದೂಡಲಾಯಿತು.over against UP

► Follow us on –  Facebook / Twitter  / Google+

Facebook Comments

Sri Raghav

Admin