ರಾಜ್ಯಸಭೆ ಚುನಾವಣೆ : ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಈ ಸುದ್ದಿಯನ್ನು ಶೇರ್ ಮಾಡಿ

Ravishanakar-Prasad-Arun

ನವದೆಹಲಿ,ಮಾ.8- ರಾಜಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದೆ. ಉತ್ತರ ಪ್ರದೇಶದಿಂದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಬಿಹಾರದ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಸ್ಪರ್ಧಿಸಲಿದ್ದು, ಮಾ.23ರಂದು ವಿವಿಧ ರಾಜ್ಯಗಳ ವಿಧಾನಸಭೆಯಿಂದ ಚುನಾವಣೆ ನಿಗದಿಯಾಗಿದೆ.  ಬಿಜೆಪಿಯ ಹಾಲಿ 17 ಜನ ಸದಸ್ಯರು ನಿವೃತ್ತಿಯಾಗಲಿದ್ದಾರೆ. ಇದೀಗ ಏಳು ಕೇಂದ್ರ ಸಚಿವರು ಮತ್ತು ಓರ್ವ ಪ್ರಧಾನಿ ಕಾರ್ಯದರ್ಶಿ ಸ್ಪರ್ಧಿಸುವ ಬಗ್ಗೆ ಬಿಜೆಪಿ ಪ್ರಕಟಿಸಿದೆ.

ಉತ್ತರ ಪ್ರದೇಶದಿಂದ ಅರುಣ್ ಜೇಟ್ಲಿ ಹಾಗೂ ಬಿಹಾರದಿಂದ ರವಿಶಂಕರ್ ಪ್ರಸಾದ್, ಪಕ್ಷದ ಕಾರ್ಯದರ್ಶಿ ಭೂಪೇಂದ್ರ ಯಾದವ್, ಮಧ್ಯ ಪ್ರದೇಶದಿಂದ ಧರ್ಮೇಂದ್ರ ಪ್ರಧಾನ್, ತಾವರ್ ಚಂದ್ ಗೆಹ್ಲೋಟ್, ಗುಜರಾತ್ ನಿಂದ ಪುರಷೋತ್ತಮ ರೂಪಾಲ, ಮುನ್ ಸುಖ್ ಮಾಂಡವೀಯ, ಹಿಮಾಚಲ ಪ್ರದೇಶದಿಂದ ಜೆ.ಪಿ. ನಡ್ಡಾ ಹಾಗೂ ರಾಜಸ್ಥಾನದಿಂದ ಭೂಪೇಂದ್ರ ಯಾದವ್ ಸ್ಪರ್ಧಿಸಲಿದ್ದಾರೆ ಎಂದು ಪ್ರಕಟಣೆ ಹೊರಡಿಸಿದೆ.

Facebook Comments

Sri Raghav

Admin