ರಾಜ್ಯಾದ್ಯಂತ ಉತ್ತಮ ಮಳೆಯಿಂದ ಭರ್ತಿಯಾಗುತ್ತಿವೆ ಜಲಾಶಯಗಳು

ಈ ಸುದ್ದಿಯನ್ನು ಶೇರ್ ಮಾಡಿ

KRS-Dam

ಬೆಂಗಳೂರು, ಸೆ.11-ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆಯಿಂದ ಜಲಾಶಯಗಳು ಭರ್ತಿಯಾಗತೊಡಗಿವೆ. ಪ್ರಮುಖ ಜಲಾಶಯಗಳಾದ ಕೆಆರ್‍ಎಸ್ 105 ಅಡಿ ಮಟ್ಟ ತಲುಪಿದೆ. ಗರಿಷ್ಠ ಮಟ್ಟ 124.80 ಅಡಿಯಿದ್ದು, ಪ್ರಸ್ತುತ 105 ಅಡಿಗೆ ತಲುಪಿದ್ದು, ಒಳಹರಿವು 12.114 ಸಾವಿರ ಕ್ಯೂಸೆಕ್, ಹೊರಹರಿವು 5.894 ಸಾವಿರ ಕ್ಯೂಸೆಕ್ ಇದೆ. ಹಾರಂಗಿ ಜಲಾಶಯ ಭರ್ತಿಯಾಗಲು ಕೇವಲ 2 ಅಡಿ ಬಾಕಿ ಇದೆ. ಗರಿಷ್ಠ ಮಟ್ಟ 2,859 ಅಡಿ ಇದ್ದು, ಇಂದಿನ ಮಟ್ಟ 2,857ಕ್ಕೆ ತಲುಪಿದೆ. ಒಳಹರಿವಿನ ಪ್ರಮಾಣ 1400 ಕ್ಯೂಸೆಕ್ ಇದೆ.

ಕಬಿನಿ ಜಲಾಶಯದ ಗರಿಷ್ಠ ಮಟ್ಟ 2,284 ಅಡಿಗಳಿದ್ದು, ಇಂದಿನ ಮಟ್ಟ2,278 ಅಡಿಗಳಷ್ಟಿದೆ. ಹೇಮಾವತಿ ಗರಿಷ್ಠ 2,922,ಇಂದಿನ ಮಟ್ಟ 2,890  ಅಡಿಗಳಾಗಿದೆ.  ಲಿಂಗನಮಕ್ಕಿ ಜಲಾಶಯದ ನೀರಿನ ಗರಿಷ್ಠ ಮಟ್ಟ 1819 ಅಡಿಗಳಿದ್ದು, ಇಂದಿನ ಮಟ್ಟ 1795 ಅಡಿಗಳಾಗಿದೆ. ಒಳಹರಿವಿನ ಪ್ರಮಾಣವೂ ಹೆಚ್ಚಾಗಿದೆ. ತುಂಗಭದ್ರಾ 1633 ಗರಿಷ್ಠ ಮಟ್ಟವಿದ್ದು, 1624 ಇಂದಿನ ಮಟ್ಟವಿದೆ.

ಮಲಪ್ರಭಾ, ಘಟಪ್ರಭಾ ಜಲಾಶಯಗಳೂ ಕೂಡ ಭರ್ತಿಯಾಗತೊಡಗಿವೆ. ಭದ್ರಾ ಜಲಾಶಯದ ಗರಿಷ್ಠ ಮಟ್ಟ 186 ಅಡಿಗಳಷ್ಟಿದ್ದು, ಇಂದಿನ ಮಟ್ಟ 164 ಅಡಿಗಳಾಗಿದೆ. ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಗರಿಷ್ಠ ಮಟ್ಟ 519.60 ಮೀಟರ್ ಇದ್ದು, ಇಂದಿನ ಮಟ್ಟ 519.60 ನಷ್ಟಿದೆ. ಹೊರಹರಿವಿನ ಪ್ರಮಾಣ 11.023 ಕ್ಯೂಸೆಕ್ ಇದೆ.

Facebook Comments

Sri Raghav

Admin