ರಾಜ್ಯಾದ್ಯಂತ ಬಿಜೆಪಿ ತಿರಂಗಾ ಯಾತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

BJP

ಬೆಂಗಳೂರು, ಆ.8- ನಾಳೆಯಿಂದ ರಾಜ್ಯಾದ್ಯಂತ ತಿರಂಗಾ ಯಾತ್ರೆ ಹಮ್ಮಿಕೊಳ್ಳಲು ರಾಜ್ಯ ಬಿಜೆಪಿ ನಿರ್ಧರಿಸಿದೆ.  ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ನಾಳೆ ಪ್ರಭಾತ್‍ಪೇರಿ, ದೇಶಭಕ್ತಿ ಗೀತೆಗಳೊಂದಿಗೆ ತಿರಂಗಾ ಯಾತ್ರೆ ನಡೆಯಲಿದೆ. ಆ. 14, 15ರಂದು ಯುವ ಮೋರ್ಚಾದಿಂದ ಪಂಜಿನ ಮೆರವಣಿಗೆ, ಆ.18ರಂದು ಸೈನಿಕರಿರುವ ಕಡೆ, ಪೆÇಲೀಸರು ಇಲ್ಲವೆ ಈಶಾನ್ಯ ರಾಜ್ಯಗಳ ಜನರ ನಡುವೆ ರಕ್ಷಾ ಬಂಧನ್ ಆಚರಿಸಬೇಕು ಎಂದು ನಿರ್ಧರಿಸಲಾಗಿದೆ.   ಆ. 16 ರಿಂದ 23ರವರೆಗೆ ಮಲೆನಾಡಿನಲ್ಲಿ ಬೈಕ್ ಜಾಥಾ, ಎಲ್ಲ ವಾರ್ಡ್‍ಗಳಲ್ಲಿ ಮಹಿಳೆಯರೂ ದ್ವಿಚಕ್ರ ವಾಹನ ಜಾಥಾ ನಡೆಸಲು ನಿರ್ಧರಿಸಲಾಗಿದೆ. ಧ್ವಜ ಹಿಡಿದು ಸಾಗುವವರು ವಿರೋಧಿ ಘೋಷಣೆ ಕೂಗಬಾರದು. ಆಯಾ ಭಾಗದ ಶಾಸಕರು ಇದಕ್ಕೆ ಗಮನ ನೀಡಬೇಕು. ವಾಹನಕ್ಕೆ ಧ್ವಜ ಕಟ್ಟಬಾರದು, ಕೈಯಲ್ಲಿ ಹಿಡಿದಿರಬೇಕು ಎಂದು ನಿಯಮ ರೂಪಿಸಲಾಗಿದೆ.
ಕೇಂದ್ರದಿಂದ ನಾಯಕರು, ಸಚಿವರು ಕೆಲವು ಕಡೆ ಬರುತ್ತಾರೆ. ಸ್ವಾತಂತ್ರ್ಯ ಹೋರಾಟ ನಡೆದ ಜಾಗಗಳಲ್ಲಿ ಈ ನಾಯಕರ ಕಾರ್ಯಕ್ರಮ ಆಗಬೇಕು. ರಾಜÁ್ಯಧ್ಯಕ್ಷರೂ ಬರುವ ಸಾಧ್ಯತೆ ಇದೆ. ಐದು ಕಾರ್ಯಕ್ರಮಗಳು ರಾಷ್ಟ್ರ ನಾಯಕರ ಉಪಸ್ಥಿತಿಯಲ್ಲಿ ಆಗಲಿದೆ ಎಂದು ತಿಳಿಸಲಾಗಿದೆ. ಎಲ್ಲರೂ ಖಾದಿ ಬಟ್ಟೆ ತೊಡಬೇಕು: ಪ್ರತಿಯೊಬ್ಬರೂ ಕನಿಷ್ಠ ಒಂದಾದರೂ ಖಾದಿ ಉಡುಪು ತೊಡಬೇಕು. ವಿಶೇಷ ದಿನವಾಗಿರುವುದರಿಂದ ಕೊಂಡಿರುವ ಖಾದಿ ಬಟ್ಟೆ ಇಲ್ಲದಿದ್ದರೆ ಕೊಂಡು ಧರಿಸಬೇಕು ಎಂಬುದು ಕೇಂದ್ರದ ಯೋಜನೆಗಳು ಎಂದು ಸಭೆಯಲ್ಲಿ ತಿಳಿಸಲಾಯಿತು.

ರಾಜ್ಯದ ಕಾರ್ಯಕ್ರಮಗಳು:

ರನ್ ಫಾರ್ ಭಾರತ್ ಆ.14ರ ರಾತ್ರಿ, ರನ್ ಫಾರ್ ಭಾರತ್ ಯೋಜನೆಯು ಬೆಂಗಳೂರು ನಗರ, ನಗರ ಜಿಲ್ಲೆ ಸಹಯೋಗದೊಂದಿಗೆ ನಡೆ ಯಲಿದೆ. ರಾತ್ರಿ 10ರಿಂದ ದೇಶಭಕ್ತಿ ಪ್ರದರ್ಶನ ಆಗಲಿದೆ. ಆ.21ರಂದು ಗಿಡಗಳನ್ನು ನೆಡುವುದು. ಪಂಚಾಯ್ತಿವರೆಗೂ ಈ ಕಾರ್ಯಕ್ರಮ ನೀಡಬಹುದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
16 ರಿಂದ 23ರ ವರೆಗೆ ವಾಹನಗಳಲ್ಲಿ ದೇಶಭಕ್ತಿ ಗೀತೆಗಳ ಮೂಲಕ ಜಾಥಾ ಮಾಡಿದರೆ ಜನರಿಗೆ ಗೊತ್ತಾಗುತ್ತದೆ. ಶಾಸಕರು ಈ ದಿನಗಳಲ್ಲಿ ಕ್ಷೇತ್ರ ಬಿಡಬಾರದು. ಎಲ್ಲ ಮೋರ್ಚಾಗಳು ತೊಡಗಿಕೊಳ್ಳಬೇಕು. ಮೊದಲ ಬಾರಿ ಖಾದಿಗೆ ಹೆಚ್ಚು ಗಮನ ಕೊಡಲಾಗುತ್ತಿದೆ. ನಾವೂ ಮೋದಿ ಅವರ ಆಶಯಕ್ಕೆ ಸ್ಪಂದಿಸಿದಂತಾಗುತ್ತದೆ. ಆ.21ಕ್ಕೆ ಗಿಡ ನೆಡು ವುದನ್ನು ಯಶಸ್ವಿಗೊಳಿಸಬೇಕು ಎಂದು ಸೂಚಿಸಿದ್ದಾರೆ. ವಿಶೇಷವಾಗಿ ಸ್ವಾತಂತ್ರ್ಯೋತ್ಸವವನ್ನು ಕೇವಲ ಸರ್ಕಾರಿ ಸಮಾರಂಭಕ್ಕೆ ಸೀಮಿತಗೊಳಿಸದೆ ಜನರ ಸಮಾರಂಭವಾಗಿ ಮಾಡುವ ಸಲುವಾಗಿ ರಾಷ್ಟ್ರಮಟ್ಟದಲ್ಲಿ ನೀಡಿರುವ ಕರೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರು ಸಭೆ ಗಮನಕ್ಕೆ ತಂದರಲ್ಲದೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಮ್ಮಿ ಕೊಂಡ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತೆ ಸೂಚಿಸಿದರು.

Facebook Comments

Sri Raghav

Admin