ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ

ಈ ಸುದ್ದಿಯನ್ನು ಶೇರ್ ಮಾಡಿ

NANJANAGUDU

ನಂಜನಗೂಡು, ಫೆ.7- ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ಆಶ್ರಯದಲ್ಲಿ ಮೈಸೂರು ಜಿಲ್ಲಾ ಕರವೇ ಅದ್ಯಕ್ಷ ಪೈ. ಪ್ರವೀಣ್ ಕುಮಾರ್‍ರವರ ಹುಟ್ಟು ಹಬ್ಬದ ಅಂಗವಾಗಿ ನಡೆದ ರಾಜ್ಯ ಮಟ್ಟದ 30 ಜೊತೆ ಕಾಟಾ ಕುಸ್ತಿ ಪಂದ್ಯಾವಳಿಯಲ್ಲಿ ಪುಣೆಯ ಪೈ.ವಿಷ್ಣುಕೋತ್ ಜಯಶಾಲಿಯಾಗಿ ನಗದು ಮತ್ತು ಪಾರಿತೋಷಕವನ್ನು ಮುಡಿಗೇರಿಸಿಕೊಂಡರು. ಮಾರ್ಫಟ್ ಕುಸ್ತಿಯಲ್ಲಿ ಪುಣೆಯ ಪೈ.ವಿಷ್ಣುಕೋತ್ ಮತ್ತು ದಾವಣಗೆರೆಯ ಪೈ.ಕಾರ್ತಿಕ್ ಕಾಟೆ ನಡುವೆ 1 ಘಂಟೆಗಳ ಕಾಲ ನಡೆದ ಕಾದಾಟದಲ್ಲಿ ಅಂತಿಮವಾಗಿ ವಿಷ್ಣುಕೋತ್ ಗೆಲುವಿನ ನಗೆ ಬೀರಿದರು.ಮೈಸೂರಿನ ಪೈ. ಛೋಟಾ ಫರ್ವೀಜ್ ಮತ್ತು ಪೈ. ಕಿರಣ್ ನಡುವೆ ನಡೆದ ಕುಸ್ತಿಯಲ್ಲಿ ಫರ್ವೀಜ್‍ರವರು ಗೆದ್ದರೆ ಮತ್ತು ದಾವಣೆಗೆರೆಯ ಪೈ.ಆನಂದ್, ಬಿಜಾಪುರದ ಪೈ.ರವಿಚಂದ್ರರವರ ಮೇಲೆ 30 ನಿಮಿಷಗಳ ಗೆಲುವು ಸೋಲಿನ ಪಂದ್ಯದಲ್ಲಿ ಗೆಲುವು ಸಾಧಿಸಿ ನಗದು ಮತ್ತು ಪಾರಿತೋಷಕ ಪಡೆದರು.

ಮೈಸೂರಿನ ಕುಂಬಾರ ಕೊಪ್ಪಲಿನ ಪೈ.ಶರತ್, ಪೈ. ಮಾರುತಿಯನ್ನು ಮಣಿಸಿದರು. ನಂಜನಗೂಡು ಪೈ. ರಂಗಸ್ವಾಮಿ, ಪೈ.ದರ್ಶನ್ ರವರ ವಿರುದ್ದ ಜಯಗಳಿಸಿದರು. ನಂಜನಗೂಡು ಕುರಬಗೇರಿ ಗರಡಿಯ ಪೈ.ಹರ್ಷ, ಗಾಂಧಿನಗರದ ಪೈ. ಯೋಗೀಶ್‍ರವರನ್ನು ಸೋಲಿಸುವಲ್ಲಿ ಯಶಸ್ವಿಯಾದರು. ಉಳಿದ ಜೊತೆಗಳು ಸಮದಲ್ಲಿ ಅಂತ್ಯಗೊಂಡವು, ಮದ್ಯಾಹ್ನ 3 ಘಂಟೆಗೆ ಆರಂಭವಾದ ಕುಸ್ತಿಗಳು ರಾತ್ರಿ 10 ಘಂಟೆಯ ತನಕ ನಡೆದು ಸಹಸ್ರಾರು ಜನರು ಮೈ ನವಿರೇಳಿಸುವ ಕುಸ್ತಿಯನ್ನು ವೀಕ್ಷಿಸಿ ಸಂಭ್ರಮಿಸಿದರು. ಹಿರಿಯ ರಾಜಕೀಯ ಮುಖಂಡ ಕಳಲೆ ಕೇಶವಮೂರ್ತಿ, ದಿ.ಪಿ.ಕಾಂತರಾಜಸ್ವಾಮಿ ಪುತ್ರ ಮೋಹನ್, ಜಿಲ್ಲಾ ಕ.ರ.ವೇ ಅಧ್ಯಕ್ಷ ಪ್ರವೀಣ್ ಕುಮಾರ್, ಉದ್ಯಮಿ ಗೋವರ್ಧನ್, ಬಿ.ಜೆ.ಪಿ ಮುಖಂಡ ಅಖಿಲೇಶ್, ನಗರಸಭಾ ಉಪಾಧ್ಯಕ್ಷ ಪ್ರದೀಪ್, ಲಾರಿ ಮಾಲೀಕರ ಅಧ್ಯಕ್ಷ ಬಿ.ರೇವಣ್ಣ, ರಾಜ್ಯ ಕ.ರ.ವೇ ಉಪಾದ್ಯಕ್ಷ ಆರ್. ಚಲುವರಾಜು, ರೋಟರಿ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ ಮತ್ತಿತರರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

 

Facebook Comments

Sri Raghav

Admin