ರಾಜ್ಯ ರೈತರ ಹಿತ ಕಾಪಾಡಿ

ಈ ಸುದ್ದಿಯನ್ನು ಶೇರ್ ಮಾಡಿ

krv

ನಂಜನಗೂಡು, ಸೆ.9- ಕಾವೇರಿಯಿಂದ ತೆಮಿಳುನಾಡಿಗೆ ನೀರು ಬಿಟ್ಟಿರುವುದನ್ನು ಕೂಡಲೇ ಸ್ಥಗಿತಗೊಳಿಸಿ, ರಾಜ್ಯ ರೈತರ ಹಿತ ಕಾಯುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ, ಕರವೇ (ಪ್ರವೀಣ್‍ಶಟ್ಟಿ) ಬಣದ ತಾಲ್ಲೂಕು ಅಧ್ಯಕ್ಷ ಮಹದೇವಪ್ರಸಾದ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಕಪಿಲಾ ನದಿ ಸೇತುವೆ ಮೇಲೆ ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿ, ಗ್ರೇಡ್ 2 ತಹಸಿಲ್ಧಾರ್ ಬಸವರಾಜು ಹೆಚ್. ಚಿಗರಿಯವರಿಗೆ ಮನವಿ ಪತ್ರ ನೀಡಿದರು. ನಂತರ ಮಾತನಾಡಿದ ಅವರು, ರಾಜ್ಯದ ರೈತರ, ಜನತೆಯ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ರಾಜ್ಯ ಸರ್ಕಾರ ಕಾವೇರಿ ನೀರನ್ನು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋಟ್‍ನಲ್ಲಿ ಮರುಪರಿಶೀಲನೆ ಅರ್ಜಿ ಹಾಕಿ ಕಾನೂನಾತ್ಮಕ ಹೋರಾಟ ಮುಂದುವರೆಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶಿವಮೂರ್ತಿ ನಾಯಕ್, ಸೋಮ, ಮಹೇಂದ್ರ, ಅನಂತ್, ಸಿದ್ದರಾಜು, ಮಂಜು, ತ್ರೀನೇಶ್, ಸ್ನೇಕ್ ಗಿರಿ, ಗಜೇಂದ್ರ, ದಿವಾಕರ್ಮ ನಂದೀಶ್, ಶರತ್, ನಾಗೇಶ್, ಮಣಿ, ಬಾಬು, ಉಮೇಶ್, ಬಸವರಾಜು, ರಜತ್‍ಗೌಡ, ನೂರಾರು ಕರವೇ ಕಾರ್ಯಕರ್ತರು ಇದ್ದರು.
ಮುನ್ನೆಚ್ಚರಿಕೆ ಕ್ರಮವಾಗಿ ವೃತ್ತ ನಿರೀಕ್ಷಕ ಎಂ.ಸಿ,ರವಿಕುಮಾರ್, ಪಿಎಸೈಗಳಾದ ವಿ.ಚೇತನ್, ಪುನೀತ್,ನೇತೃತ್ವದಲ್ಲಿ ಸೂಕ್ತ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin