ರಾಜ್ಯ ಹೈಕೋರ್ಟ್’ನಲ್ಲಿ ಬೆರಳಚ್ಚುಗಾರರ (ಟೈಪಿಸ್ಟ್) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

Typiast

ಕರ್ನಾಟಕ ಹೈಕೋರ್ಟ್ ನಲ್ಲಿ 34 ಬೆರಳಚ್ಚುಗಾರರ (ಟೈಪಿಸ್ಟ್) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ :

ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿಜ್ಞಾನ/ ಕಲೆ/ ವಾಣಿಜ್ಯ/ ವ್ಯವಹಾರ ನಿರ್ವಹಣೆ / ಕಂಪ್ಯೂಟರ್‍ ಅಪ್ಲಿಕೇಷನ್ಸ್ ವಿಷಯಗಳ ಪದವಿ. ( ಸಾಮಾನ್ಯ ವರ್ಗ ಇತರೆ ಹಿಂದುಳಿದ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಕನಿಷ್ಠ ಶೇಕಡ 55 ರಷ್ಟು ಅಂಕಗಳನ್ನು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ಕನಿಷ್ಠ ಶೇಕಡ 50 ರಷ್ಟು ಅಂಕಗಳೊಂದಿಗಿನ ತೇರ್ಗಡೆಯಾಗಿರಬೇಕು. )
ಇಂಗ್ಲೀಷ್ ಮತ್ತು ಕನ್ನಡದಲ್ಲಿ ಹಿರಿಯ ದರ್ಜೆ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುದರೊಂದಿಗೆ ಕಂಪ್ಯೂಟರ್ ನಿರ್ವಹಣಾ ಜ್ಞಾನ ಹೊಂದಿರುವುದು ಅತ್ಯಾವಶ್ಯಕವಾಗಿರುತ್ತದೆ.
ವೇತನ ಶ್ರೇಣಿ :   ರೂ. 11600-200-12000-250-13000-300-14200-350-15600-400-17200-450-19000-500-21000 /-
ಖಾಲಿ ಹುದ್ದೆಗಳ ವರ್ಗೀಕರಣ :

ಉಳಿದ ಮೂಲವೃಂದದ 22 ಹುದ್ದೆಗಳು (20 ಬ್ಯಾಕ್ ಲಾಗ್ ಹುದ್ದೆಗಳನ್ನೊಳಗೊಂಡು) ಸ್ಥಳಿಯ ವೃಂದಗಳ 12 ಹುದ್ದೆಗಳು ( ಅಂದರೆ ಸಂವಿಧಾನದ 371-(ಜೆ) ಅನುಚ್ಛೇದದಡಿಯಲ್ಲಿ ಹೈದರಾಬಾದ್-ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಮೀಸಲಾತಿ) ( 9 ಬ್ಯಾಕ್ ಲಾಗ್ ಹುದ್ದೆಗಳನ್ನೊಳಗೊಂಡು)
ವಯೋಮಿತಿ :

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಸಲಾದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, ಪ್ರವರ್ಗ ‘2ಎ’ ಅಥವಾ ‘2ಬಿ’ ಅಥವಾ ‘3ಎ’ಅಥವಾ ‘3ಬಿ ಅಭ್ಯರ್ಥಿಗಳಿಗೆ 38 ವರ್ಷ ಮತ್ತು ಪರಿಶಿಷ್ಟ ಜಾತಿ ಅಥವಾ ಪಂಗಡದ ಅಥವಾ ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ. ಮಾಜಿ ಸೈನಿಕರಿಗೆ, ಕೇಂದ್ರ ಸಶಸ್ತ್ರ ಪಡೆಯಲ್ಲಿ ಅವರು ಸೇವೆ ಸಲ್ಲಿಸಿದ ಅವಧಿಯ ವರ್ಷಗಳ ಜೊತೆಗೆ ಮೂರು ವರ್ಷಗಳ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.
ಅರ್ಜಿ ಶುಲ್ಕ : 250/- ( ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಪ್ರವರ್ಗ-1ಕ್ಕೆ ಸೇರಿದ ಮತ್ತು ದೈಹಿಕ ಅಂಗವಿಕಲತೆ ಹೊಂದಿರುವ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.)

ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-04-2017
ಆನ್‍ಲೈನ್ ಮೂಲಕ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 04-05-2017 (ರಾತ್ರಿ 11.59 ರವರೆಗೆ)

(ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ)

——

ನಿರಂತರ ಉದ್ಯೋಗ ಮಾಹಿತಿಗಾಗಿ Eesanje News 24/7 ನ್ಯೂಸ್ ಆಪ್  ಡೌನ್ಲೋಡ್ ಮಾಡಿಕೊಳ್ಳಿ 

 Click Here to Download  :  Android / iOS  

Facebook Comments

Sri Raghav

Admin