ರಾಜ್‍ಕುಮಾರ್-ಪಾರ್ವತಮ್ಮ ಮತ್ತು 500 ರೂ. ನೋಟು..!

ಈ ಸುದ್ದಿಯನ್ನು ಶೇರ್ ಮಾಡಿ

Parvatamma--Rajkumar--03

ಬೆಂಗಳೂರು, ಮೇ 31-ವರನಟ ಡಾ.ರಾಜ್‍ಕುಮಾರ್ ಅವರ ಯಶಸ್ಸಿನ ಹಿಂದೆ ಸದಾ ಬೆನ್ನೆಲುಬಾಗಿ ಇರುತ್ತಿದ್ದ ನಿರ್ಮಾಪಕಿ ಪಾರ್ವತಮ್ಮ ಅವರು ಕುಟುಂಬದ ಸಕಲ ವ್ಯವಹಾರಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರು. ಚಿತ್ರರಂಗವೆಂಬ ಕರ್ಮಭೂಮಿಗೆ ಸಂಪೂರ್ಣ ಸಮರ್ಪಿಸಿಕೊಂಡಿದ್ದ ಮೇರುನಟನಿಗೆ ಕೌಟುಂಬಿಕ ಜವಾಬ್ದಾರಿ ಹೊರೆಯಾಗದಂತೆ ನೋಡಿಕೊಂಡಿದ್ದ ಆದರ್ಶ ಮಹಿಳೆ ಇವರು. ಹಣಕಾಸು ವ್ಯವಹಾರದಲ್ಲಿ ಡಾ.ರಾಜ್ ಎಂದು ಮುಗ್ಧರಾಗಿದ್ದರು ಎಂಬುದಕ್ಕೆ ಇಲ್ಲೊಂದು ನಿದರ್ಶನವಿದೆ.ಧಾರ್ಮಿಕ ಕಾರ್ಯಕ್ರಮವೊಂದಕ್ಕಾಗಿ ಹಣ ಸಂಗ್ರಹಿಸಲು ಗಾಜನೂರಿನಿಂದ ಗ್ರಾಮಸ್ಥರು ಸದಾಶಿವನಗರದಲ್ಲಿರುವ ಡಾ.ರಾಜ್‍ಕುಮಾರ್ ನಿವಾಸಕ್ಕೆ ಆಗಮಿಸಿದ್ದರು. ಡಾ.ರಾಜ್ ದಂಪತಿಗಳ ಅತಿಥಿ ಸತ್ಕಾರದ ನಂತರ ಗ್ರಾಮಸ್ಥರು ಪ್ರತಿ ವರ್ಷದಂತೆ ಧಾರ್ಮಿಕ ಉತ್ಸವ ನಡೆಸುವ ವಿಷಯ ತಿಳಿಸಿದರು. ಪಾರ್ವತಮ್ಮ ಅವರು ಗ್ರಾಮಸ್ಥರಿಗೆ ಹೊಸ ನೋಟುಗಳನ್ನು ನೀಡಿದರು.   ಗ್ರಾಮಸ್ಥರು ತೆರಳಿದ ನಂತರ ಡಾ.ರಾಜ್ ತಮ್ಮ ಪತ್ನಿ ಬಳಿ-ಅವರು ಅಷ್ಟು ದೂರದಿಂದ ಬಂದಿದ್ದಾರೆ. ಅವರಿಗೆ ಹೆಚ್ಚು ಹಣವನ್ನು ನೀಡದೇ ನೂರು ರೂಪಾಯಿಗಳ ನೋಟುಗಳನ್ನು ನೀಡಿ ಕಳುಹಿಸಿರುವುದು ಸರಿಯೇ? ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಪಾರ್ವತಮ್ಮನವರು-ಅದು ನೂರು ರೂಪಾಯಿಗಳ ನೋಟು ಅಲ್ಲ.

ಐನೂರು ರೂಪಾಯಿಗಳ ಹೊಸ ನೋಟು ಎಂದರು. ಪತ್ನಿಯ ಮಾತನ್ನು ನಟ ಸಾರ್ವಭೌಮ ನಂಬಲಿಲ್ಲ. ನೀನು ಸುಳ್ಳು ಹೇಳುತ್ತಿರುವೆ ಎಂದು ದಬಾಯಿಸಿದರು. ಆಗ ಪಾರ್ವತಮ್ಮ 500 ರೂ.ಗಳ ಹೊಸ ನೋಟನ್ನು ಡಾ.ರಾಜ್ ಅವರಿಗೆ ತೋರಿಸಿದರು. ಹೊಸ ನೋಟು ನೋಡಿ ವರನಟನಿಗೆ ಆಚ್ಚರಿಯಾಯಿತು. 500 ರೂ.ಗಳ ಕರೆನ್ಸಿ ಬಂದಿದೆಯೇ ಎಂದು ಕುತೂಹಲದಿಂದ ವೀಕ್ಷಿಸಿ ತಮ್ಮ ಪತ್ನಿಯ ಉದಾರ ದೇಣಿಗೆಗೆ ಮೆಚ್ಚುಗೆ ವ್ಯಕಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin