ರಾಜ್‍ಕೋಟ್‍ನಲ್ಲಿ ವ್ಯಕ್ತಿ ಬಳಿಯಿದ್ದ 1.15 ಕೋಟಿ ರೂ. ಮೌಲ್ಯದ 500-1000 ಹಳೆಯ ನೋಟುಗಳು ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Notes02

ರಾಜ್‍ಕೋಟ್, ನ.21-ಗುಜರಾತ್‍ನ ರಾಜ್‍ಕೋಟ್‍ನಲ್ಲಿ ವ್ಯಕ್ತಿಯೊಬ್ಬನ ಬಳಿ ಇದ್ದ ಬರೋಬರಿ 1.15 ಕೋಟಿ ಮೊತ್ತದ 500 ಹಾಗೂ 1000 ರೂ. ನೋಟನ್ನು ವಶಕ್ಕೆ ಪಡೆಯಲಾಗಿದೆ. 500 ಹಾಗೂ ಸಾವಿರ ರೂಪಾಯಿಯ ನೋಟು ಬ್ಯಾನ್ ಆದ ಹಿನ್ನೆಲೆಯಲ್ಲಿ ಈತ ಈ ಹಳೆ ನೋಟುಗಳನ್ನು ಬದಲಾವಣೆ ಮಾಡಿ ವೈಟ್ï ಮಾಡಿಕೊಳ್ಳಲು ಇಬ್ಬರು ಏಜೆಂಟ್‍ಗಳಿಗೆ ನೀಡಲು ನಿರ್ಧರಿಸಿದ್ದ ಎಂದು ರಾಜ್‍ಕೋಟ್ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಬ್ಯಾನ್ ಆದ 500 ಹಾಗೂ ಸಾವಿರ ಮುಖಬೆಲೆಯ 1 ಕೋಟಿ 15 ಲಕ್ಷ ಮೊತ್ತದ ನೋಟು ಇವರ ಬಳಿ ಇತ್ತು.

ಅಕ್ರಮವಾಗಿ ಇದನ್ನು ಬದಲಾವಣೆಗೆ ಯತ್ನಿಸುತ್ತಿದ್ದಾಗ ಆರೋಪಿಗಳನ್ನು ಬಂಧಿಸಲಾಗಿದೆ. ಬಳಿಕ ಇಷ್ಟು ಹಣವನ್ನು ಜೀಪ್‍ನಲ್ಲಿ ಸಾಗಣೆ ಮಾಡಲಾಯಿತು ಎಂದು ಯೂನಿವರ್ಸಿಟಿ ಪೊಲೀಸ್ ವೃತ್ತ ನಿರೀಕ್ಷಕ ಕೆಕೆ ಜಾಲಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೋಟ್ ಬ್ಯಾನ್ ಘೋಷಣೆ ಮಾಡಿದ ಬಳಿಕ ದೇಶಾದ್ಯಂತ ಸಾವಿರ ಕೋಟಿಗೂ ಅಧಿಕ ಮೊತ್ತದ ಅಕ್ರಮ ಹಣ ಜಪ್ತಿ ಮಾಡಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin