ರಾತ್ರಿ 10 ಗಂಟೆ ನಂತರ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧ

ಈ ಸುದ್ದಿಯನ್ನು ಶೇರ್ ಮಾಡಿ

Chamundi-Hills
ಮೈಸೂರು, ಮೇ 17- ಇತ್ತೀಚಿನ ದಿನಗಳಲ್ಲಿ ಚಾಮುಂಡಿ ಬೆಟ್ಟದಲ್ಲಿ ಅಪರಾಧ ಹಾಗೂ ಅನೈತಿಕ ಚಟುವಟಿಕೆಗಳು ಹೆಚ್ಚಾಗಿರುವ ನಿಟ್ಟಿನಲ್ಲಿ ಅದನ್ನು ತಡೆಗಟ್ಟಲು ಚಾಮುಂಡಿ ಬೆಟ್ಟಕ್ಕೆ ರಾತ್ರಿ 10ರ ನಂತರ ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ.ಚಾಮುಂಡಿ ಬೆಟ್ಟದ ಪ್ರವೇಶ ದ್ವಾರದಲ್ಲಿ ಈ ಸಂಬಂಧ ನಾಮಫಲಕ ಅಳವಡಿಸಲಾಗಿದೆ.ಇತ್ತೀಚೆಗೆ ಚಾಮುಂಡಿ ಬೆಟ್ಟದಲ್ಲಿ ಸರಗಳ್ಳತನ, ಪಿಕ್‍ಪಾಕೆಟ್ ಸೇರಿದಂತೆ ವಿವಿಧ ಕಳ್ಳತನ ಹೆಚ್ಚಾಗಿವೆ. ಅಲ್ಲದೆ ಜನಸಂದಣಿ ಇಲ್ಲದ ಸ್ಥಳಗಳಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದುದಲ್ಲದೆ, ಮದ್ಯವ್ಯಸನಿಗಳ ಅಡ್ಡೆಯೂ ಆಗಿತ್ತು. ಪಡ್ಡೆ ಹುಡುಗರು ರಾತ್ರಿ ವೇಳೆ ಪಾರ್ಟಿ ಮಾಡಿ ದಾಂಧಲೆ ಉಂಟು ಮಾಡುತ್ತಿದ್ದುದರಿಂದ ಈ ನಿಷೇಧ ಹೇರಲಾಗಿದೆ.ಚಾಮುಂಡಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲೂ ಗೇಟ್ ಅಳವಡಿಸಲಾಗುತ್ತಿದೆ. ದೇಶ-ವಿದೇಶಗಳಿಂದ ಚಾಮುಂಡಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು, ಭಕ್ತಾದಿಗಳು ಬರುವುದರಿಂದ ಭದ್ರತೆ ದೃಷ್ಟಿಯಿಂದ ಈ ಕ್ರಮಕ್ಕೆ ಮುಂದಾಗಿದೆ.ಅಲ್ಲದೆ ಚಾಮುಂಡಿ ಬೆಟ್ಟಕ್ಕೆ ಹೋಗುವ ಎಲ್ಲ ರಸ್ತೆಗಳ ಪ್ರವೇಶ ದ್ವಾರ ಹಾಗೂ ಪ್ರಮುಖ ಸ್ಥಳ ದೇವಾಲಯದ ಸುತ್ತ ಸಿಸಿಟಿವಿಯನ್ನು ಅಳವಡಿಸಲಾಗುತ್ತಿದೆ.ಪ್ರಮುಖವಾಗಿ ಧಾರ್ಮಿಕ ಕ್ಷೇತ್ರದ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin