ರಾಬರಿ ದಂಪತಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

arrest

ಕುಣಿಗಲ್,ಸೆ.23-ಮಹಿಳೆಯರ ಗಮನ ಬೇರೆಡೆ ಸೆಳೆದು ದರೋಡೆ ಮಾಡುತ್ತಿದ್ದ ಚಾಲಾಕಿ ದಂಪತಿಯನ್ನು ಪಟ್ಟಣ ಪೊಲೀಸರು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಇಂಡಿಕಾ ಕಾರನ್ನು ವಶಪಡಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಪುಟ್ಟೇಗೌಡನ ದೊಡ್ಡಿಯ ನಿವಾಸಿ ನಾಗರಾಜು(40), ಮತ್ತು ಪದ್ಮ(30) ಬಂಧಿತ ದಂಪತಿ. ಇವರು ವೃತ್ತಿಪರ ಚೋರರಾಗಿದ್ದು , ಜನಜಂಗುಳಿಗಳಿರುವ ಸ್ಥಳಗಳಲ್ಲಿ ಮಹಿಳೆಯರ ಗಮನವನ್ನು ಬೇರೆಡೆ ಸೆಳೆದು ತಮ್ಮ ಕೈ ಚಳಕ ತೋರಿ ಮಾಂಗಲ್ಯ ಸರ, ಚಿನ್ನಾಭರಣಗಳನ್ನು ದೋಚುತ್ತಿದ್ದರು.

ಅದರಂತೆಯೇ ಕಳೆದ ಒಂದೂವರೆ ತಿಂಗಳ ಹಿಂದೆ ಹುತ್ರಿ ದುರ್ಗ ಹೋಬಳಿ ಗಡಸಿಂಗನಹಳ್ಳಿ ಗ್ರಾಮದ ಮನೆಗೆ ನುಗ್ಗಿ ಕಳ್ಳತನ ಎಸಗಿ ಪರಾರಿಯಾಗಿದ್ದರು. ನಂತರ ಕುಣಿಗಲ್ ಪಟ್ಟಣದ ಶನಿ ಮಹಾತ್ಮ ದೇವಾಲಯದ ಬಳಿ ವಯೋವೃದ್ದರೆಯರನ್ನು ಹೆದರಿಸಿ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ದಂಪತಿಯ ಪತ್ತೆಗಾಗಿ ಜಿಲ್ಲಾ ಎಸ್ಪಿ ಕಾರ್ತಿಕ್ ರೆಡ್ಡಿ, ಡಿವೈಎಸ್ಪಿ ಚಂದ್ರಶೇಖರ್, ಸಿಪಿಐ ಬಾಳೆಗೌಡ, ಪಿಎಸ್‍ಐ ಧರ್ಮೇಗೌಡ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಆನೇಕಲ್ ತಾಲ್ಲೂಕು ಜಿಗಣಿ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ ಒಂದು ಇಂಡಿಕಾ ಕಾರು ಹಾಗೂ ಮೂರು ಲಕ್ಷ ರೂ. ಬೆಳೆ ಬಾಳುವ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin