ರಾಮದಾಸ್ ವಿರುದ್ಧ ಸ್ಪರ್ಧೆಗಿಳಿಯುತ್ತೇನೆಂದಿದ್ದ ಪ್ರೇಮಕುಮಾರಿ ಪತ್ತೆಯಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

Prema-Kumari--02
ಮೈಸೂರು, ಏ.24- ಮಾಜಿ ಸಚಿವ ಎಸ್.ಎ.ರಾಮದಾಸ್ ಅವರಿಂದ ತನಗೆ ಅನ್ಯಾಯವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದ ಪ್ರೇಮಕುಮಾರಿ ಮಧ್ಯಾಹ್ನದವರೆಗೂ ನಗರದಲ್ಲೆಲ್ಲೂ ಕಾಣಿಸಿಕೊಳ್ಳಲೇ ಇಲ್ಲ. ಕಳೆದ ಎರಡು ವಾರಗಳ ಹಿಂದೆ ಸುತ್ತೂರು ಮಠ ಹಾಗೂ ಆರ್‍ಎಸ್‍ಎಸ್ ಕಚೇರಿಗೆ ಭೇಟಿ ನೀಡಿ ರಾಮದಾಸ್ ಅವರಿಂದ ಅನ್ಯಾಯವಾಗಿದೆ. ಅವರು ಕೆ.ಆರ್.ಕ್ಷೇತ್ರದಿಂದ ಸ್ಪರ್ಧಿಸಿದರೆ ತಾನು ಅವರಿಗೆ ವಿರುದ್ಧವಾಗಿ ಸ್ಪರ್ಧಿಸುತ್ತೇನೆ. ತನಗೆ ನೆರವು ನೀಡಿ ಎಂದು ಮನವಿ ಮಾಡಿದ್ದರು.

ರಾಮದಾಸ್ ಅವರಿಗೆ ಕೆ.ಆರ್.ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಘೋಷಣೆಯಾಗುವವರೆಗೂ ತನ್ನ ಪರ ಪ್ರಚಾರದಲ್ಲಿ ತೊಡಗಿದ್ದರು. ರಾಮದಾಸ್ ಉಮೇದುವಾರಿಕೆ ಸಲ್ಲಿಸುತ್ತಿದ್ದಂತೆ ಚುನಾವಣಾ ಕಣದಲ್ಲೆಲ್ಲೂ ಕಾಣಿಸುತ್ತಿಲ್ಲ. ಈ ಹಿಂದೆ ಮನೆ ಮನೆಗೆ ಭೇಟಿ ನೀಡಿ ಮತ ಕೇಳುತ್ತಿದ್ದ ಆಕೆ ಎಲ್ಲೂ ಪ್ರಚಾರಕ್ಕೆ ಬಂದಿಲ್ಲ. ಆಕೆಯನ್ನು ಹಲವರು ಸಂಪರ್ಕಿಸಲು ಯತ್ನಿಸಿದಾಗ ಯಾವುದೇ ಕರೆಯನ್ನು ಸ್ವೀಕರಿಸುತ್ತಿಲ್ಲ. ಜತೆಗೆ ಮನೆ ಬಳಿ ಬಂದವರನ್ನು ಭೇಟಿಯಾಗುತ್ತಿಲ್ಲ. ಪ್ರೇಮಕುಮಾರಿ ಮಧ್ಯಾಹ್ನದವರೆಗೂ ನಾಮಪತ್ರ ಸಲ್ಲಿಸಿರಲಿಲ್ಲ. ಈಕೆಯ ಈ ನಡೆ ಹಲವು ಅನುಮಾನಕ್ಕೆ ಎಡೆ ಮಾಡಿದೆ.

Facebook Comments

Sri Raghav

Admin