ರಾಮದುರ್ಗ ಸಬ್‍ಜೈಲ್ ಕಿಟಕಿ ಮುರಿದು ಖೈದಿಗಳಿಬ್ಬರು ಎಸ್ಕೇಪ್

ಈ ಸುದ್ದಿಯನ್ನು ಶೇರ್ ಮಾಡಿ

Prison-Jail-Breake

ಬೆಳಗಾವಿ,ಜೂ.21-ವಿಚಾರಣಾಧೀನ ಖೈದಿಗಳಿಬ್ಬರು ಕಿಟಕಿ ಸರಳು ಮುರಿದು ಪರಾರಿಯಾಗಿರುವ ಘಟನೆ ಜಿಲ್ಲೆಯ ರಾಮದುರ್ಗ ಉಪಬಂದೀಖಾನೆಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ. ಬೈಕ್ ಕಳವು ಪ್ರಕರಣದಲ್ಲಿ ಜೈಲು ಸೇರಿದ್ದ ಸುರೇಶ್ ಶರಣಪ್ಪ ಛಲವಾದಿ(36) , ಸಂತೋಷ್ ಶಿವಣ್ಣ ನಂದಿಹಾಳ್(36) ಕಳೆದ ಮೂರು ತಿಂಗಳಿನಿಂದ ಬಂದೀಖಾನೆಯಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು.  ಇಂದು ಬೆಳಗಿನ ಜಾವ ಪೊಲೀಸರ ಕಣ್ತಪ್ಪಿಸಿ ಕಿಟಕಿಯ ಸರಳುಗಳನ್ನು ಮುರಿದು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಪರಾರಿಯಾದ ಖೈದಿಗಳಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸಿದ್ದಾರೆ. ಶೀಘ್ರವೇ ಅವರಿಬ್ಬರನ್ನು ಬಂಧಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin