ರಾಮನಗರ : ಶಾರ್ಟ್ ಸಕ್ರ್ಯೂಟ್‍ ಗೋದಾಮಿಗೆ ಬೆಂಕಿ ಬಿದ್ದು ಭಾರೀ ನಷ್ಟ

ಈ ಸುದ್ದಿಯನ್ನು ಶೇರ್ ಮಾಡಿ

Fire-02

ರಾಮನಗರ,ಜ.5-ಶಾರ್ಟ್ ಸಕ್ರ್ಯೂಟ್‍ನಿಂದ ಬಿಡಿ ಬಟ್ಟೆ , ರಬ್ಬರ್ ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ ಬಿದ್ದು , ಭಾರೀ ನಷ್ಟ ಸಂಭವಿಸಿರುವ ಘಟನೆ ಐಜೂರು ವೃತ್ತದ ಸಮೀಪದಲ್ಲಿ ನಡೆದಿದೆ. ಸೈಯದ್ ಮದಾಹಿದ್ ಎಂಬುವರಿಗೆ ಸೇರಿದ ಮೈಸೂರು ಪಾಲಿಮರ್ಸ್ ಪ್ರೈವೇಟ್ ಲಿಮಿಟೆಡ್ ಗೋದಾಮಿಗೆ ಬೆಂಕಿ ಬಿದ್ದಿದ್ದು , ಬಿಲ್ಡಿಂಗ್‍ನ ಎರಡು ಕೊಠಡಿಗಳಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಸಂಪೂರ್ಣವಾಗಿ ಭಸ್ಮವಾಗಿವೆ  ಗೋಡೌನ್‍ನಲ್ಲಿದ್ದ ಬಿಡಿ ಬಟ್ಟೆ ಹಾಗೂ ಸಿಲ್ಕ್ ಬೆಂಕಿಗೆ ಆಹುತಿಯಾಗಿವೆ. ಧಗಧಗನೆ ಉರಿಯುತ್ತಿರುವ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

ಎರಡು ಕೊಠಡಿಯಲ್ಲಿದ್ದ ಯಂತ್ರೋಪಕರಣಗಳು ಹಾಗೂ ಬಿಲ್ಡಿಂಗ್‍ನ ಕಬ್ಬಿಣದ ವಸ್ತುಗಳು ಸಹ ಸುಟ್ಟು ಹೋಗಿವೆ. ಮೂರು ಅಗ್ನಿಶಾಮಕ ದಳಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin