ರಾಮಮಂದಿರ ನಿರ್ಮಾಣ ಆರಂಭಿಸಲು ಬಿಜೆಪಿಗೆ ಶಿವಸೇನೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Ram-Mandir

ಮುಂಬೈ, ಅ.13-ಘೋಷಣೆಗಳನ್ನು ಮಾರ್ದನಿ ಸುವ ಬದಲು ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿ ಎಂದು ಶಿವಸೇನೆ ಬಿಜೆಪಿಯನ್ನು ಆಗ್ರಹಿಸಿದೆ. ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನವೇ ಈ ಕಾರ್ಯಕ್ಕೆ ಚಾಲನೆ ದೊರೆಯಲಿದೆ ಎಂದು ಬಿಜೆಪಿ ಹಿರಿಯ ನಾಯಕ ಡಾ. ಸುಬ್ರಮಣಿಯನ್ ಸ್ವಾಮಿ ನೀಡಿದ ಹೇಳಿಕೆ ನಂತರ ಸೇನೆ ತನ್ನ ಪಟ್ಟನ್ನು ಬಿಗಿಗೊಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ 300ಕ್ಕೂ ಹೆಚ್ಚು ಸಂಸದರ ಬೆಂಬಲವಿದೆ. ಇಷ್ಟು ಸಂಖ್ಯೆ ಎಂಪಿಗಳ ಬೆಂಬಲದೊಂದಿಗೆ ಈಗ ರಾಮಮಂದಿರ ನಿರ್ಮಾಣ ಕಾರ್ಯವನ್ನು ಆರಂಭಿಸದಿದ್ದರೆ, ಇನ್ಯಾವಾಗ ಅದನ್ನು ಮಾಡುತ್ತೀರಿ ಎಂದು ಶಿವಸೇಖೆ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬಿಜೆಪಿ ಧುರೀಣರನ್ನು ಪ್ರಶ್ನಿಸಲಾಗಿದೆ.

ಸರ್ಜಿಕಲ್ ದಾಳಿ ಮತ್ತು ಉತ್ತರಪ್ರದೇಶ ವಿಧಾನಸಭೆ ಚುನಾವಣೆಗಳಿಗೆ ಮುನ್ನವೇ ಲಕ್ನೋದಲ್ಲಿ ರ್ಯಾಲಿ ನಡೆಸಿ ಪ್ರಧಾನಿ ಮೋದಿ ಹೆಚ್ಚು ವಿಶ್ವಾಸ ಗಳಿಸಿದ್ದಾರೆ. ಹೀಗಾಗಿ ಈಗ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುವುದಕ್ಕೆ ಇದು ಸಕಾಲ. ಆದ್ದರಿಂದ ಶೀಘ್ರದಲ್ಲೇ ಈ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಬೇಕು ಎಂದು ಬಿಜೆಪಿ ಮಿತ್ರಪಕ್ಷವೂ ಆಗಿರುವ ಶಿವಸೇನೆ ಆಗ್ರಹಪಡಿಸಿದೆ. ಉತ್ತರಪ್ರದೇಶದಲ್ಲಿನ ಚುನಾವಣೆಗಳು ಬಿಜೆಪಿಗೆ ಒಂದು ರೀತಿಯ ಜೀವನ್ಮರಣದ ಪ್ರಶ್ನೆ ಇದ್ದಂತೆ. ಕೇವಲ ಘೋಷಣೆಗಳನ್ನು ಹೊರಡಿಸದೇ ಶಿಲಾನ್ಯಾಸ ಕಾರ್ಯ ಆರಂಭಿಸಿ ಎಂದು ಒತ್ತಾಯಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin