ರಾಮಾಯಣದರ್ಶನಂ ಗಮಕ, ನೃತ್ಯ ರೂಪ ಶ್ಲಾಘನೆ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಜ.3- ಕುವೆಂಪು ವಿರಚಿತ ರಾಮಾಯಣ ದರ್ಶನಂ ಮಹಾಕಾವ್ಯ ಆಧುನಿಕ ಸಾಹಿತ್ಯದ ಅಪೂರ್ವ ಕೃತಿ, ಕುವೆಂಪು ಇಪ್ಪತ್ತನೆಯ ಶತಮಾನಕ್ಕೆ ಸಾಕ್ಷಿಯಾಗಿ ಬಾಳಿದರು. ಅವರ ವಿಶ್ವಮಾನವ ಸಂದೇಶ ಸಾರ್ವಕಾಲಿಕವಾದುದು ಎಂದು ಉದ್ಭವ ಪ್ರಕಾಶನದ ಅಧ್ಯಕ್ಷ ಡಾ.ಜೆ.ಪಿ ಕೃಷ್ಣೇಗೌಡ ಹೇಳಿದರು.ನಗರದ ಕುವೆಂಪು ಕಲಾ ಮಂದಿರದಲ್ಲಿ ಉದ್ಭವ ಪ್ರಕಾಶನ, ಕಲಾ ಸೇವಾ ಸಂಘ, ಆಶಾಕಿರಣ ಚಾರಿಟಬಲ್ ಟ್ರಸ್ಟ್, ಅಳಸಿಂಗ ವೇದಿಕೆ, ಕುವೆಂಪು ವಿದ್ಯಾನಿಕೇತನ, ಹಾಗೂ ಸೀತಾಳ ಮಲ್ಲಿಕಾರ್ಜುನ ಟ್ರಸ್ಟ್‍ನ ಸಹಯೋಗದಲ್ಲಿ ಏರ್ಪಡಿಸಿದ ಶ್ರೀ ರಾಮಾಯಣದರ್ಶನಂ ದರ್ಶನಂ ಕಾವ್ಯದ ಗಮಕ-ನೃತ್ಯ-ಚಿತ್ರ ಜುಗಲ್‍ಬಂಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಮಾಯಣದರ್ಶನಂ ದರ್ಶನಂನಲ್ಲಿ ಪ್ರತಿ ಪಾತ್ರವನ್ನು ಉದಾತ್ತೀಕರಿಸಿ ಆಧುನಿಕ ಪ್ರಪಂಚಕ್ಕೆ ಹೊಂದಿಕೊಳ್ಳುವಂತೆ ರೂಪಿಸಿದ ಕೀರ್ತಿ ಕುವೆಂಪು ಅವರದ್ದು ಇಂಥದೊಂದು ಕಾವ್ಯವನ್ನು ಗಮಕ-ವಾಚನ-ವ್ಯಾಖ್ಯಾನ ಹಾಗೂ ನೃತ್ಯ ಚಿತ್ರಗಳಿಂದ ಜನಮನಕ್ಕೆ ಸುಲಭವಾಗಿ ಮುಟ್ಟಿಸಬಹುದಾಗಿದೆ. ಉದ್ಭವ ಪ್ರಕಾಶನ ಮೊದಲಬಾರಿಗೆ ಅಂತಹ ಪ್ರಯತ್ನ ಮಾಡಿದೆ ಎಂದು ಶ್ಲಾಘಿಸಿದರು.ಕುವೆಂಪು ಜೀವನ- ಸಾಧನೆಯ ಸಂಚಿಕೆಯನ್ನು ಲೋಕಾರ್ಪಣೆ ಮಾಡಿದ ಉದ್ಭವ ಪ್ರಕಾಶನ ಮ್ಯಾನೇಜಿಂಗ್ ಟ್ರಸ್ಟಿ ಡಿ.ಎಚ್. ನಟರಾಜ್ ಮಾತನಾಡಿ ರಾಮಾಯಣ- ಮಹಾಭಾರತ ಗ್ರಂಥಗಳು ಪವಿತ್ರವೆಂಬ ಭಾವನೆಯಿರುವುದರಿಂದಲೇ ನೂರಾರು ಕೃತಿಗಳು ಪುನರ್‍ಸೃಷ್ಟಿಯಾಗಿವೆ. ಕುವೆಂಪು ರಾಮಾಯಣ ದರ್ಶನಂ ಕಾವ್ಯವನ್ನು ರಚಿಸುವುದರ ಮೂಲಕ ಯುಗದ ಕವಿ-ಜಗದಕವಿಯಾಗಿ ಮಾನ್ಯರಾದರು ಎಂದರು.

ಕಲಾ ಸೇವಾ ಸಂಘದ ಅಧ್ಯಕ್ಷ ಕೆ.ಮೋಹನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಗಮಕದಂಥ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಾಗ ಯುವ ಪೀಳಿಗೆ ಕಾವ್ಯಗಳತ್ತ ಗಮನಹರಿಸಬಹುದೆಂದರು. ಆಶಾಕಿರಣ ಅಂಧ ಮಕ್ಕಳ ಶಾಲೆಯ ಎಚ್.ಸಿ.ಮಹೇಶ್ ಉಪಸ್ಥಿತರಿದ್ದರು.ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಆಯ್ದಭಾಗಗ¼ನ್ನು ಗಮಕಿ ಎಚ್.ಎಂ.ನಾಗರಾಜರಾವ್ ಆರಭಿ ಹಿಂದೋಳ ಶಿವರಂಜನಿ ಭೈರವಿ ರಾಗಗಳಲ್ಲಿ ವಾಚಿಸಿದರು.ಸಾಹಿತಿ ಬೆಳವಾಡಿ ಮಂಜುನಾಥ ಕನ್ನಡದ ವಿವಿಧ ರಾಮಾಯಣಗಳಿಂತ ರಾಮಾಯಣ ದರ್ಶನಂ ಭಿನ್ನವಾಗಿರುವ ಬಗೆಯನ್ನು ವಿಶ್ಲೇಷಿಸಿದರು. ಬೆಂಗಳೂರಿನ ರಂಗಾರಾಮ್ ಆರ್ಟ್ ಫೌಂಡೇಷನ್‍ನ ವಿದುಷಿ ವಿದ್ಯಾಲಕ್ಷ್ಮೀ ತಂಡದವರ ನೃತ್ಯ, ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಮುಖ್ಯಸ್ಥ ವಿಶ್ವಕರ್ಮ ಆಚಾರ್ಯರ ಚಿತ್ರ, ಕುವೆಂಪು ಹಾಗೂ ವೀಣಾಪಾಣಿಯ ಅಭಿನಯ ಪ್ರೇಕ್ಷಕರ ಗಮನ ಸೆಳೆಯಿತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin