ರಾಮ-ಕೃಷ್ಣ ಮಾಂಸಹಾರಿಗಳು : ಹೇಳಿಕೆ ಸಮರ್ಥಿಸಿಕೊಂಡ ಮಧ್ವರಾಜ್

ಈ ಸುದ್ದಿಯನ್ನು ಶೇರ್ ಮಾಡಿ

Pramod-amdvaraj

ವಿಜಯಪುರ, ಅ.25- ಶ್ರೀರಾಮ, ಶ್ರೀಕೃಷ್ಣ ಮಾಂಸಹಾರಿಗಳೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ವಿಜಯಪುರದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ರಾಮ ಮತ್ತು ಕೃಷ್ಣ ಮಾಂಸಹಾರಿಗಳೆಂದು ನಾನು ಹೇಳಿದ್ದೆ. ಅದನ್ನು ಉಡುಪಿಯ ಪೇಜಾವರ ಶ್ರೀಗಳು ಕೂಡ ಒಪ್ಪಿದ್ದಾರೆ ಮತ್ತು ಮಧ್ವರಾಜ್ ಕೂಡ ಒಪ್ಪಿಕೊಂಡಿದ್ದಾರೆ. ನನ್ನ ಹೇಳಿಕೆಗೆ ನಾನು ಬದ್ಧನಾಗಿರುತ್ತೇನೆ ಎಂದು ಪ್ರಮೋದ್ ತಿಳಿಸಿದ್ದಾರೆ. ಶ್ರೀನಿವಾಸ ಪ್ರಸಾದ್ ರಾಜೀನಾಮೆ ನೀಡಿದ್ದರಿಂದಾಗಿ ಪಕ್ಷಕ್ಕೆ ಹಿನ್ನಡೆ ಆಗುತ್ತೆ ಮತ್ತು ಆಗುವುದಿಲ್ಲ ಎಂದು ಜಾಣತನದ ಪ್ರತಿಕ್ರಿಯೆ ನೀಡಿದ್ದರು. ಬಾಲ್ಯದಲ್ಲಿ ಗೋಲ್‍ಗುಂಬಜ್ ನೋಡುವ ಕನಸಿತ್ತು. ಅದು ಇಂದು ಈಡೇರಿದೆ. ನಾನು ವಿಶ್ವ ಪರ್ಯಟನೆ ಮಾಡಿದ್ದೇನೆ. ಆದರೆ, ಗೋಲ್‍ಗುಂಬಜ್ ಮಾತ್ರ ಅದ್ಭುತವಾಗಿದೆ ಎಂದು ಬಣ್ಣಿಸಿ ಸಚಿವರು ಖುಷಿ ಪಟ್ಟರು.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin