ರಾಯಚೂರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ಕಾರ ಮತ್ತು ಕವಿ ಸರ್ವಜ್ಞನಿಗೆ ಅವಮಾನ

ಈ ಸುದ್ದಿಯನ್ನು ಶೇರ್ ಮಾಡಿ

Raichur-01

ರಾಯಚೂರು, ಡಿ.3– ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ಕಾರದ ಜನಪರ ಯೋಜನೆಗಳ ಅಪಹಾಸ್ಯ, ಮತ್ತು ಕನ್ನಡದ ದಾರ್ಶನಿಕ ಕವಿ ಸರ್ವಜ್ಞನನ್ನು ಅವಹೇಳನ ಮಾಡಲಾಗಿದೆ ಎಂದು ಕನ್ನಡಪರ ಸಂಘಟನೆಗಳು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಕರ ವಿರುದ್ಧ ಪ್ರತಿಭಟನೆ ನಡೆಸಿ ಕ್ಷಮಾಪಣೆಗೆ ಆಗ್ರಹಿಸಿವೆ.  ವಾಸಕ್ಕೆ ಆಶ್ರಯ ಮನೆ ಇರಲು, ರೂಪಾಯಿಗೊಂದು ಕೆಜಿ ಅಕ್ಕಿ ಸಿಗುತ್ತಿರಲು, ರಾತ್ರಿ ನಶೆಗೆ ಅಗ್ಗದ ಮದ್ಯವಿರಲು, ಕೂಲಿ ಕೆಲಸಕ್ಕೆ ಬೆಂಕಿ ಹಚ್ಚೆಂದ ಸರ್ವಜ್ಞ ಎಂಬ ಬ್ಯಾನರ್‍ಗಳನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಳವಡಿಸುವ ಮೂಲಕ ಸರ್ಕಾರದ ಯೋಜನೆಗಳನ್ನು ಅಪಹಾಸ್ಯ ಮಾಡಿರುವುದಲ್ಲದೆ ದಾರ್ಶನಿಕ ಕವಿ ಸರ್ವಜ್ಞನ ತ್ರಿಪದಿಗಳನ್ನು ಕೂಡ ಅವಹೇಳನ ಮಾಡಲಾಗಿದೆ ಎಂದು ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸಾಹಿತ್ಯ ಸಮ್ಮೇಳನದ ಆಯೋಜಕರ ವಿರುದ್ಧ ಪ್ರತಿಭಟನೆ ನಡೆಸಿ ಈ ಎಲ್ಲ ಭಿತ್ತಿಪತ್ರಗಳನ್ನು ತೆಗೆಸಬೇಕು ಮತ್ತು ಬಹಿರಂಗವಾಗಿ ನಾಡಿನ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರ ಬಡ ಜನರಿಗೆ ಆಶ್ರಯ ಮನೆ, ಹಸಿವನ್ನು ನಿವಾರಿಸಲು ಅಕ್ಕಿಯನ್ನು ಪೂರೈಸುತ್ತಿದೆ. ಇಂತಹ ಯೋಜನೆಗಳನ್ನು ಅವಹೇಳನ ಮಾಡುವಂತಹ ಭಿತ್ತಿಪತ್ರಗಳನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡಿದೆ. ಅಲ್ಲದೆ, ದಾರ್ಶನಿಕ ಕವಿಯನ್ನು ಕೂಡ ಅವಮಾನ ಮಾಡಿದೆ. ಸಾಹಿತ್ಯ ಪರಿಷತ್‍ನ ಅಧ್ಯಕ್ಷರು, ಪದಾಧಿಕಾರಿಗಳು ಈ ರೀತಿಯ ಕೆಲಸಗಳನ್ನು ಮಾಡಬಾರದು. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅವರ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು ಎಂಬ ಎಚ್ಚರಿಕೆ ನೀಡಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin