ರಾಯಚೂರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಊಟ, ವಸತಿ ಸಿಗದೆ ಪರದಾಡಿದ ಕನ್ನಡಾಭಿಮಾನಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Raichur-04

ರಾಯಚೂರು, ಡಿ.3- ನಿನ್ನೆ ಅದ್ಧೂರಿಯಾಗಿ ಆರಂಭವಾದ 82ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅವ್ಯವಸ್ಥೆಯ ಆಗರವಾಗಿತ್ತು. ದೂರದೂರುಗಳಿಂದ ರಾಯಚೂರಿಗೆ ಆಗಮಿಸಿದ್ದ ಹಲವು ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳಿಗೆ ವಸತಿ ಸೌಕರ್ಯ, ಊಟದ ವ್ಯವಸ್ಥೆ ಸಿಗದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿ ಆಯೋಜಕರ ವಿರುದ್ಧ ವಾಗ್ವಾದಕ್ಕಿಳಿದಿದ್ದ ಪರಿಸ್ಥಿತಿ ಕಂಡುಬಂತು.  ನಿನ್ನೆ ನಡೆದ 82ನೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಲಕ್ಷಕ್ಕೂ ಹೆಚ್ಚು ಜನ ಆಗಮಿಸಿದ್ದರು. ಸಮ್ಮೇಳನದ ಆಯೋಜಕರು ವ್ಯವಸ್ಥಿತವಾಗಿಯೇ ಎಲ್ಲ ಸೌಲಭ್ಯಗಳನ್ನೂ ಮಾಡಿದ್ದರು. ಸ್ವಯಂ ಸೇವಕರು, ಸಾಹಿತ್ಯಾಸಕ್ತರಿಗೆ, ಕನ್ನಡಾಭಿಮಾನಿಗಳಿಗೆ ಕೈಲಾದ ಸೌಲಭ್ಯಗಳನ್ನು ಒದಗಿಸುತ್ತಿದ್ದರು. ಏಕಾಏಕಿ ಸಾಕಷ್ಟು ಜನ ಆಗಮಿಸಿದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಊಟ, ವಸತಿ ಸೌಲಭ್ಯಗಳನ್ನು ಮಾಡಲು ಸಾಧ್ಯವಾಗಿಲ್ಲ. ಇದರಿಂದ ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು, ಚಾಮರಾಜನಗರ, ಕೋಲಾರ, ಮೈಸೂರು ಮುಂತಾದೆಡೆಯಿಂದ ಆಗಮಿಸಿದ್ದ ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಬೇಕಾಯಿತು.

ನೋಂದಣಿ ಮಾಡಿಸಿಕೊಂಡು ಅಗತ್ಯ ಶುಲ್ಕ ಕಟ್ಟಿ ನಾವು ಬಂದಿದ್ದರೂ ಇಲ್ಲಿ ಫುಟ್‍ಪಾತ್ ಮೇಲೆ ಮಲಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಯೋಜಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಕೇಳಿಬಂತು. ಇದಕ್ಕೆ ಆಯೋಜಕರು ಸಮಜಾಯಿಷಿ ನೀಡಿ ಲಕ್ಷಾಂತರ ಜನ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಇಂತಹ ಸಣ್ಣಪುಟ್ಟ ಸಮಸ್ಯೆಗಳು ಆಗುತ್ತವೆ. ನಾಡಿನ ದೊಡ್ಡ ಕಾರ್ಯಕ್ರಮದಲ್ಲಿ ಇಂತಹ ಸಮಸ್ಯೆಗಳಾಗುವುದು ಸಹಜ. ಇದನ್ನು ಸರಿಪಡಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin