ರಾಯಣ್ಣ ಬ್ರಿಗೇಡ್ ದಾರಿ ತಪ್ಪಿಲ್ಲ : ರಾಜ್ಯಾಧ್ಯಕ್ಷ ಮುಕುಡಪ್ಪ
ಬೆಳಗಾವಿ, ಫೆ.23-ರಾಯಣ್ಣ ಬ್ರಿಗೇಡ್ ದಾರಿ ತಪ್ಪಿಲ್ಲ. ಈಶ್ವರಪ್ಪ ಅವರನ್ನು ರಾಜಕೀಯವಾಗಿ ಉಳಿಸಿಕೊಳ್ಳಲು ಬ್ರಿಗೇಡ್ ಸ್ಥಾಪನೆ ಮಾಡಿಲ್ಲ ಎಂದು ಬ್ರಿಗೇಡ್ ರಾಜ್ಯಾಧ್ಯಕ್ಷ ಮುಕುಡಪ್ಪ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಣ್ಣ ಬ್ರಿಗೇಡ್ಗೆ ಈಶ್ವರಪ್ಪನವರ ಬೆಂಬಲವಿದೆ. ಆದರೆ, ದಲಿತರ ಅನ್ಯಾಯದ ವಿರುದ್ಧ ಹೋರಾಟ ಮಾಡಲು ಹುಟ್ಟುಹಾಕಿದ ಬ್ರಿಗೇಡ್ ಸಂಘಟನೆ ಬಲಪಡಿಸಲು ನಾಲ್ಕು ತಂಡ ರಚಿಸಲಾಗಿದೆ ಎಂದರು. ಮುಂದಿನ ರಾಯಣ್ಣ ಬ್ರಿಗೇಡ್ನ ವಿದ್ಯಾರ್ಥಿ ಸಂಘಟನೆ ಮಾಡುವಾಗ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೂ ಆಹ್ವಾನ ನೀಡಲಾಗುವುದು.
ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕ ಪಡೆದ 10 ಸಾವಿರ ವಿದ್ಯಾರ್ಥಿಗಳಿಗೆ ಸಹಾಯ ಧನ ನೀಡಲಾಗುವುದು. ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಸಂಘಟನೆ ಬೆಳೆಸಲು ಸ್ವಾತಂತ್ರ್ಯ ಯೋಧರ ಹುತಾತ್ಮರ ಆದರ್ಶ ಬೆಳೆಸುವ ಕಾರ್ಯ ಬ್ರಿಗೇಡ್ ಮಾಡುತ್ತದೆ ಎಂದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS