ರಾಯಣ್ಣ ಬ್ರಿಗೇಡ್ ನಿಂದ ಸಿಎಂಗೆ ನಡುಕ ಶುರುವಾಗಿದೆ : ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Eshwarappa

ಬಾಗಲಕೋಟೆ, ಆ.30-ಸಂಗೊಳ್ಳಿರಾಯಣ್ಣ ಬ್ರಿಗೇಡ್ ಪ್ರಾರಂಭವಾದಾಗಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಡುಕ ಶುರುವಾಗಿದೆ ಎಂದು ಮೇಲ್ಮನೆ ಪ್ರತಿಪಕ್ಷದ ನಾಯಕ ಈಶ್ವರಪ್ಪ ಸಿದ್ದುಗೆ ತಿರುಗೇಟು ನೀಡಿದ್ದಾರೆ.  ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದವರು, ರೈತರು, ದಲಿತರು ರಾಯಣ್ಣ ಬ್ರಿಗೇಡ್ಗೆ ಬರುತ್ತಿರುವುದರಿಂದ ಮುಖ್ಯಮಂತ್ರಿಯವರಿಗೆ ನಡುಕ ಶುರುವಾಗಿದೆ. ಅದಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.  ಮಂಡಲ್ ಆಯೋಗವನ್ನು ಬಿಜೆಪಿ ವಿರೋಧಿಸಿ ನ್ಯಾಯಾಲಯಕ್ಕೆ ಹೋಗಿತ್ತು ಎಂದು ಸಿದ್ದರಾಮಯ್ಯ ಅವರು ಬಂಡಲ್ ಬಿಡುತ್ತಿದ್ದಾರೆ ಎಂದು ಹೇಳಿದರು.

ಹಿಂದುಳಿದ ಮಠ, ಮಂದಿರಗಳಿಗೆ ನೀವೆಷ್ಟು ಹಣ ಕೊಟ್ಟಿದ್ದೀರಿ ಹೇಳಿ, ಹಿಂದುಳಿದ ದಲಿತರ ಮಠಗಳ ಸ್ವಾಮೀಜಿಗಳಿಗೆ ಇದುವರೆಗೂ ನೀವು ಯಾವುದೇ ರೀತಿಯ ಬೆಂಬಲ ಕೊಟ್ಟಿಲ್ಲ ಎಂದು ಅವರು ಆರೋಪಿಸಿದ್ದಾರೆ.  ನಿಮಗೆ ಇನ್ನೂ ಎರಡು ವರ್ಷ ಅಧಿಕಾರಾವಧಿ ಇದೆ. ಈಗಲಾದರೂ ಅವರಿಗೆ ಅನುಕೂಲ ಮಾಡಿಕೊಡಿ ಎಂದು ಹೇಳಿದರು.  ರಾಜ್ಯಸರ್ಕಾರಕ್ಕೆ ಶಕ್ತಿ ಇದ್ದಷ್ಟು ಮೊದಲು ರೈತರ ಸಾಲ ಮನ್ನಾ ಮಾಡಿ ನಂತರ ಕೇಂದ್ರದ ಕಡೆ ಮುಖ ಮಾಡಿ. ಅದನ್ನು ಬಿಟ್ಟು ಎಲ್ಲದಕ್ಕೂ ಕೇಂದ್ರವನ್ನು ದೂಷಿಸಬೇಡಿ ಎಂದು ಈಶ್ವರಪ್ಪ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲು ಕೇಂದ್ರ 25 ಸಾವಿರ ಕೋಟಿಯಲ್ಲಿ ಅರ್ಧ ಸಾಲ ಮನ್ನಾ ಮಾಡಿದರೆ ನಾವು ಅರ್ಧ ಮನ್ನಾ ಮಾಡುತ್ತೇವೆ ಎಂದು ಹೇಳುವುದು ರಾಜ್ಯದ ರೈತರಿಗೆ ಮಾಡುತ್ತಿರುವ ವಂಚನೆ ಎಂದು ಹರಿಹಾಯ್ದರು. ಮೊದಲು ತಮ್ಮ ಪಾಲಿನ ಕೆಲಸವನ್ನು ಮಾಡಲಿ ಎಂದು ಸವಾಲು ಹಾಕಿದರು.

► Follow us on –  Facebook / Twitter  / Google+

Facebook Comments

Sri Raghav

Admin