ರಾಯಣ್ಣ ಬ್ರಿಗೇಡ್ ಸ್ಥಾಪನೆ ಯಡಿಯೂರಪ್ಪ ವಿರುದ್ಧ ಶಕ್ತಿಪ್ರದರ್ಶನಕ್ಕಲ್ಲ : ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

eshwaraao
ಹಾವೇರಿ, ಅ.1- ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ನಿರೀಕ್ಷೆ ಮೀರಿ ಜನ ಬೆಂಬಲ ದೊರೆತಿದೆ ಎಂದು ಹೇಳಿರುವ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ನಿಜಕ್ಕೂ ಇದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಪರ್ಯಾಯ ಶಕ್ತಿ ಪ್ರದರ್ಶನವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  ಕಾವೇರಿಯಲ್ಲಿ ಇಂದು ನಡೆದ ರಾಯಣ್ಣ ಬ್ರಿಗೇಡ್ ಸಮಾವೇಶಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಈಶ್ವರಪ್ಪ , ನಾಯಕ ಯಡಿಯೂರಪ್ಪ ಮತ್ತು ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬುವುದೇ ನಮ್ಮ ಉದ್ದೇಶ ಎಂದು ತಿಳಿಸಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿಯವರೇ ಮುಖ್ಯಮಂತ್ರಿಯಾಗಬೇಕೆನ್ನುವುದು ನಮ್ಮ ಮುಖ್ಯ ಗುರಿ.

ಬ್ರಿಗೇಡ್‌ಗೆ ದಲಿತರು, ಹಿಂದುಳಿದ ವರ್ಗದವರು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳ ಬೆಂಬಲ ದೊರಕಿದೆ ಎಂದರು.  ಮುಖ್ಯಮಂತ್ರಿ ಸ್ಥಾನ ನೀಡುವ ಆಮಿಷವೊಡ್ಡಿದರೆ ಬೇರೆ ಪಕ್ಷಗಳಿಗೆ ಹೋಗುವ ಸಾಧ್ಯತೆಗಳೇನಾದರೂ ಇವೆಯಾ ಎಂಬ ಪ್ರಶ್ನೆಗೆ ತೀಕ್ಷ್ಣವಾಗಿ ಉತ್ತರಿಸಿದ ಈಶ್ವರಪ್ಪ ಪಕ್ಷ ಬದಲಿಸುವ ಜಾಯಮಾನ ನನ್ನದಲ್ಲ ಎಂದರು.  ನಾನು ಯಾವತ್ತೂ ತತ್ವ ಸಿದ್ಧಾಂತಗಳಿಗೆ ಬದ್ಧ. ನನ್ನ ಕೊನೆಯುಸಿರು ಇರುವವರಗೂ ಬಿಜೆಪಿಯಲ್ಲೆ ಇರುತ್ತೇನೆ. ಕೇವಲ ಅಕಾರವೊಂದೇ ಗುರಿಯಲ್ಲ. ಕೆಲ ಪಕ್ಷಗಳ ಮುಖಂಡರು ನನ್ನನ್ನು ಅವರ ಪಕ್ಷಕ್ಕೆ ಕರೆಯುತ್ತಿರುವುದು ನಿಜ. ಆದರೆ ನಾನು ಹೋಗುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಅಕಾರದಲ್ಲಿದ್ದಾಗ ಮಠಮಾನ್ಯಗಳಿಗೆ ಸಾಕಷ್ಟು ಹಣ ನೀಡಿದ್ದು , ಈಗ ಎಲ್ಲ ಮಠಾಶರು ನಮ್ಮ ರಾಯಣ್ಣ ಬ್ರಿಗೇಡ್‌ಗೆ ಬೆಂಬಲ ನೀಡುತ್ತಿದ್ದಾರೆ ಎಂದರು.

► Follow us on –  Facebook / Twitter  / Google+

Facebook Comments

Sri Raghav

Admin