ರಾಷ್ಟ್ರಮಟ್ಟದಲ್ಲಿ ಎನ್‍ಡಿಎ ಜೊತೆಸೇರಲು ನಿತೀಶ್‍ಗೆ ಅಮಿತ್ ಷಾ ಅಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

Nitish-Kuan-r------01

ನವದೆಹಲಿ, ಆ.12-ರಾಷ್ಟ್ರಮಟ್ಟದಲ್ಲಿ ಎನ್‍ಡಿಎ ಜೊತೆ ಕೈಜೋಡಿಸುವಂತೆ ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿ(ಯು) ಅಧ್ಯಕ್ಷ ನಿತೀಶ್ ಕುಮಾರ್ ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಹ್ವಾನ ನೀಡಿದ್ದಾರೆ. ಬಿಹಾರದಲ್ಲಿ ಹೊಸ ಸರ್ಕಾರ ರಚನೆಗಾಗಿ ಕೇಸರಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ನಿತೀಶ್ ಕೇಂದ್ರದ ಆಡಳಿತಾರೂಢ ಎನ್‍ಡಿಎಗೆ ಸೇರುವಂತೆ ಕೋರಿರುವುದು ಹೊಸ ಬೆಳವಣಿಗೆಯಾಗಿದೆ.

ನಿನ್ನೆ ನನ್ನ ನಿವಾಸದಲ್ಲಿ ಜೆಡಿ(ಯು) ಅಧ್ಯಕ್ಷ ನಿತೀಶ್ ಕುಮಾರ್ ಅವರನ್ನು ನಾನು ಭೇಟಿ ಮಾಡಿದೆ. ಎನ್‍ಡಿಎಗೆ ಸೇರುವಂತೆಯೂ ಜೆಡಿ(ಯು)ಗೆ ನಾನು ಆಹ್ವಾನ ನೀಡಿದೆ ಎಂದು ಅಮಿತ್ ಷಾ ಇಂದು ಟ್ವೀಟರ್‍ನಲ್ಲಿ ತಿಳಿಸಿದ್ದಾರೆ.  ಬಿಹಾರದ ಪ್ರಾದೇಶಿಕ ಪಕ್ಷವಾಗಿರುರವ ಜೆಡಿ(ಯು) ಆ.19ರಂದು ಪಾಟ್ನಾದಲ್ಲಿ ನಡೆಯಲಿರುವ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಎನ್‍ಡಿಎ ಸೇರುವ ನಿರೀಕ್ಷೆ ಇದ್ದು, ಆನಂತರ ಪ್ರಧಾನಿ ನರೇಂದ್ರ ಮೋದಿ ಸಂಪುಟ ಸೇರುವ ಸಾಧ್ಯತೆ ಇದೆ.

Facebook Comments

Sri Raghav

Admin