ರಾಷ್ಟ್ರಮಟ್ಟದ ಈಜುಗಾತಿ ತನಿಕಾ ಧಾರಾ ಆತ್ಮಹತ್ಯೆ
ಮುಂಬೈ, ಜ.28-ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಷ್ಟ್ರಮಟ್ಟದ ಈಜುಗಾತಿ ತನಿಕಾಧಾರಾ (23) ಮುಂಬೈ ಲೋಯರ್ ಪರೆಲ್ನ ಪೂನಾವಾಲಾ ಚೌಲ್ನ ತನ್ನ ಮನೆಯಲ್ಲಿ ನಿನ್ನೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ನಡೆದ 70ನೇ ರಾಷ್ಟ್ರೀಯ ಅಕ್ವಾಟಿಕ್ಸ್ ಕ್ರೀಡಾಕೂಟದ ಒಂದು ಮೀಟರ್ ಸ್ಪ್ರಿಂಗ್ಬೋರ್ಡ್ ವಿಭಾಗದಲ್ಲಿ ತನಿಖಾ ಬೆಳ್ಳಿ ಪದಕ ಗೆದ್ದಿದ್ದರು. ಆಲ್ಲದೇ, 2015ರಲ್ಲಿ ತಿರುವನಂತಪುರಂನಲ್ಲಿ ನಡೆ 35ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕಂಚು ಪದಕ ಗಳಿಸಿದ್ದರು.
ವೆಸ್ಟರ್ನ್ ರೈಲ್ವೆಯಲ್ಲಿ ಕಿರಿಯ ಸಹಾಯಕಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಗೆಳತಿ ನಿನ್ನೆ ಮನೆಗೆ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿತು. ತನಿಕಾ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS