ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧ : ನಗರ ವ್ಯಾಪ್ತಿಯ ಬಾರ್‍ಗಳು ಸೇಫ್

ಈ ಸುದ್ದಿಯನ್ನು ಶೇರ್ ಮಾಡಿ

High-Way

ನವದೆಹಲಿ, ಜು.4- ರಾಷ್ಟ್ರೀಯ ಹೆದ್ದಾರಿಗಳಲ್ಲಿ 500 ಮೀಟರ್ ವ್ಯಾಪ್ತಿ ಯೊಳಗೆ ಮದ್ಯ ಮಾರಾಟ ನಿಷೇಧಿಸಿರುವ ಸುಪ್ರೀಂಕೋರ್ಟ್ ಆದೇಶ ಕಟ್ಟುನಿಟ್ಟಾಗಿ ಅನ್ವಯವಾಗುವುದೆಂಬ ಆತಂಕಕ್ಕೆ ಒಳಗಾಗಿದ್ದ ಬೆಂಗಳೂರು ನಗರ ವ್ಯಾಪ್ತಿಯ ಬಾರ್ ಮತ್ತು ಪಬ್ ಮಾಲೀಕರಿಗೆ ಈಗ ದೊಡ್ಡ ರಿಲೀಫ್ ಲಭಿಸಿದೆ. ಮದ್ಯ ಮಾರಾಟ ನಿಷೇಧ ಎನ್‍ಎಚ್‍ಗಳಲ್ಲಿರುವ ಮದ್ಯದಂಗಡಿಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಸುಪ್ರೀಂಕೋರ್ಟ್ ಇಂದು ಮಹತ್ವದ ಹೇಳಿಕೆ ನೀಡುವ ಮೂಲಕ ಬೆಂಗಳೂರಿನ ಪ್ರಮುಖ ರಸ್ತೆಗಳ ಬಾರ್ ಮತ್ತು ಪಬ್‍ಗಳು ನಿರಾತಂಕವಾಗಿ ತನ್ನ ವ್ಯಾಪಾರ-ವಹಿವಾಟು ಮುಂದುವರಿಸಲು ಅವಕಾಶ ದೊರೆತಿದೆ.

ನಗರ ವ್ಯಾಪ್ತಿಯಲ್ಲಿರುವ ಹೆದ್ದಾರಿಗಳು ಮತ್ತು ರಸ್ತೆಗಳನ್ನು ಡಿ ನೋಟಿಫೈ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದು ಸುಪ್ರೀಂಕೋರ್ಟ್ ಇಂದು ನೀಡಿರುವ ಹೇಳಿಕೆಯಿಂದಾಗಿ ಬೆಂಗಳೂರು ನಗರ ಸರಹದ್ದಿನ ಬಾರ್ ಮತ್ತು ಪಬ್‍ಗಳು ಸುಪ್ರೀಂಕೋರ್ಟ್ ಆದೇಶದ ವ್ಯಾಪ್ತಿಯಿಂದ ಹೊರಗುಳಿಯುವಂತಾಗಿದ್ದುಮಾಲೀಕರ ಸಂತಸಕ್ಕೆ ಕಾರಣವಾಗಿದೆ.
ಬೆಂಗಳೂರು ನಗರದ ಬಾರ್ ಮತ್ತು ಪಬ್‍ಗಳ ಮಾಲೀಕರು ಈ ಸಂಬಂಧ ಸುಪ್ರೀಂಕೋರ್ಟ್‍ಗೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಇಂದು ನಡೆಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ 500 ಮೀಟರ್ ಒಳಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಇದು ನಗರ ವ್ಯಾಪ್ತಿಯ ಪ್ರದೇಶಗಳಿಗೆ ಅನ್ವಯವಾಗದು ಎಂದು ನ್ಯಾಯಪೀಠವೊಂದು ಅಭಿಪ್ರಾಯಪಟ್ಟಿದೆ.

ಆತಂಕ ನಿವಾರಣೆ:

ರಾಷ್ಟ್ರೀಯ ಹೆದ್ದಾರಿಗಳಲ್ಲಿ 500 ಮೀಟರ್ ಒಳಗೆ ಮದ್ಯ ಮಾರಾಟ ನಿಷೇಧಿಸಿರುವ ಸುಪ್ರೀಂಕೋರ್ಟ್ ಆದೇಶ ಜು.1ರಿಂದ ಜಾರಿಗೆ ಬಂದರೆ, ಅದು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿರುವ ಬಾರ್‍ಗಳು ಮತ್ತು ಪಬ್‍ಗಳಿಗೂ ಅನ್ವಯವಾಗುತ್ತದೆ ಎಂಬ ಆತಂಕ ಸೃಷ್ಟಿಯಾಗಿತ್ತು. ಜಿ ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿರುವ ಬಾರ್‍ಗಳು ಮತ್ತು ಪಬ್‍ಗಳಿಗೆ ಮಾತ್ರವಲ್ಲದೇ ನಗರದ ಹಲವಾರು ಕ್ಲಬ್‍ಗಳು ಮತ್ತು ಸ್ಟಾರ್ ಹೋಟೆಲ್‍ಗಳೂ ಸರ್ವೋಚ್ಚ ನ್ಯಾಯಾಲಯದ ಆದೇಶದ ಪರಿಧಿಗೆ ಒಳಪಡಲಿದೆ ಎಂದು ಮಾಲೀಕರು ಚಿಂತೆಗೀಡಾಗಿದ್ದರು.
ಸುಪ್ರೀಂಕೋರ್ಟ್ ಆದೇಶ ಜಾರಿಗೆ ಬಂದರೆ ಪೂರ್ವ ವಲಯದಲ್ಲಿ 220 ಮತ್ತು ದಕ್ಷಿಣ ವಲಯದಲ್ಲಿ 180 ಬಾರ್ ಅಂಡ್ ರೆಸ್ಟೋರೆಂಟ್‍ಗಳು ಹಾಗೂ 20 ತಾರಾಶ್ರೇಣಿಯ ಹೋಟೆಲ್‍ಗಳ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಅಬಕಾರಿ ಇಲಾಖೆಯ ಎಚ್ಚರಿಕೆಯೂ ಆತಂಕಕ್ಕೆ ಕಾರಣವಾಗಿತ್ತು.

ಸಾಮಾಜಿಕ ಕ್ಲಬ್‍ಗಳಿಗೆ ನೀಡಲಾದ ಸಿಎಲ್-4 ಲೈಸೆನ್ಸ್ ಮೇರೆಗೆ ರಾಜ್ಯ ಸರ್ಕಾರದಿಂದ ಆರು ಕ್ಲಬ್‍ಗಳಿಗೆ ವಿನಾಯಿತಿ ಕೋರಲಾಗಿದೆ ಎಂದು ಕರ್ನಾಟಕದ ಫೆಡರೇಷನ್ ಆಫ್ ಕ್ಲಬ್ಸ್‍ನ ಕಾರ್ಯದರ್ಶಿ ಶ್ರೀಕಾಂತ್ ತಿಳಿಸಿದ್ದರು. ಪರಸ್ಪರ ಸಮ್ಮತಿ ಮೇರೆಗೆ ಇಲ್ಲಿ ಮದ್ಯ ಮಾರಾಟ ಇರುವುದಿಲ್ಲ. ತನ್ನ ಸದಸ್ಯರಿಗೆ ಸೇವೆ ನೀಡುವ ಆಧಾರದ ಮೇಲೆ ಕ್ಲಬ್‍ಗಳು ಕಾರ್ಯನಿರ್ವಹಿಸುತ್ತವೆ. ಬಹುತೇಕ ಕ್ಲಬ್‍ಗಳು 7.82 ಲಕ್ಷ ರೂ.ಗಳ ಸಿಎಲ್-4 ನವೀಕರಣ ಪರವಾನಗಿ ಶುಲ್ಕಗಳನ್ನು ಪಾವತಿಸಿವೆ ಎಂದು ಅವರು ವಿವರಿಸಿದ್ದರು.
ಕ್ಲಬ್‍ಗಳಲ್ಲಿ ಮದ್ಯ ಪೂರೈಕೆ ವಿಷಯಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿಲ್ಲ. ಆದಾಗ್ಯೂ ನಾವು ಆ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಕ್ಲಬ್‍ಗಳ ಬಗ್ಗೆ ಸ್ಪಷ್ಟ ನಿಲುವು ತಿಳಿಯಲು ನಾವು ಕೋರ್ಟ್ ಮೊರೆ ಹೋಗಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದರು.  ಕ್ಲಬ್‍ಗಳಿಗೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್‍ನಿಂದ ರಾಜ್ಯ ಸರ್ಕಾರ ಸ್ಪಷ್ಟೀಕರಣ ಸ್ವೀಕರಿಸುವ ತನಕ ಲೈಸೆನ್ಸ್‍ಗಳನ್ನು ನವೀಕರಿಸುವಂತೆ ಕ್ಲಬ್‍ಗಳು ಮನವಿ ಸಲ್ಲಿಸಿದ್ದವು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin