ರಾಷ್ಟ್ರೀಯ ಕಬಡ್ಡಿ ಆಟಗಾರ ರೋಹಿತ್’ರಿಂದ ಕಿರುಕುಳ : ಪತ್ನಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Rohit

ನವದೆಹಲಿ ಅ.19 : ರಾಷ್ಟ್ರೀಯ ಕಬಡ್ಡಿ ಆಟಗಾರ ರೋಹಿತ್ ಚಿಲ್ಲರ್ ಪತ್ನಿ ಲಲಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಸಂಜೆ ದಿಲ್ಲಿಯಲ್ಲಿರುವ ಲಲಿತಾ ತಂದೆಯ ಮನೆ ನಾಂಗ್ಲೊಯ್ನ ಅಶೋಕ ಮೊಹಲ್ಲಾದಲ್ಲಿ ಲಲಿತಾ ಸಾವಿಗೆ ಶರಣಾಗಿದ್ದಾರೆ. ಪತಿಯೊಂದಿಗಿನ ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಸಾವಿಗೂ ಮುನ್ನ ಲಲಿತಾ ಪತ್ರವೊಂದನ್ನು ಬರೆದಿಟ್ಟಿದ್ದಾರೆ. ಸಾವಿಗೆ ನಿಖರ ಕಾರಣ ಏನು ಎನ್ನುವುದನ್ನು ತಿಳಿಸಿದ್ದಾರೆ. ಲಲಿತಾ ಆತ್ಮಹತ್ಯೆಗೆ ಪ್ರಯತ್ನ ನಡೆಸಿರುವುದು ಇದು ಮೊದಲೇನಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಲಲಿತಾ ತಂದೆ ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ ಲಲಿತಾ ಕಳೆದ ವರ್ಷವಷ್ಟೇ ರೋಹಿತ್ ಕೈಹಿಡಿದಿದ್ದರು. ಚಿಲ್ಲರ್ ಮುಂಬೈನಲ್ಲಿದ್ದಾಗ ದಿಲ್ಲಿಯಲ್ಲಿದ್ದ ಲಲಿತಾ ಮನೆಯಲ್ಲಿ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದರು.

ರೋಹಿತ್ ಬಲವಂತದಿಂದ ತನ್ನನ್ನು ಒಬ್ಬಂಟಿಯಾಗಿ ಇರುವಂತೆ ಮಾಡಿದ್ದಾರೆ. ಅಲ್ಲದೆ ರೋಹಿತ್ ಸರಿಯಾಗಿ ಮನೆಗೆ ಕೂಡ ಬರುತ್ತಿಲ್ಲ. ಮಾತ್ರವಲ್ಲ ನನ್ನ ಗಂಡ ನನ್ನನು ಅವರಿಂದ ದೂರ ಹೋಗುವಂತೆ ಒತ್ತಡ ಹೇರುತ್ತಿದ್ದಾರೆ. ಇದೆಲ್ಲದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರದಲ್ಲಿ ಬರೆದಿದ್ದಾರೆ ಎಂದು ತನಿಖೆ ನೇತೃತ್ವ ವಹಿಸಿಕೊಂಡಿರುವ ಡಿಸಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin