ರಾಷ್ಟ್ರೀಯ ಚಿನ್ನ ಮತ್ತು ಆಭರಣ ಸಂಘದ ಅಧ್ಯಕ್ಷರಾಗಿ ಪೃಥ್ವಿರಾಜ್ ಕೊಠಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.27- ಭಾರತದ ಅತ್ಯಂತ ಹಳೆಯ ಮತ್ತು ಅತ್ಯುನ್ನತ ಸಂಸ್ಥೆಯಾದ ಭಾರತೀಯ ಚಿನ್ನ ಮತ್ತು ಆಭರಣಗಳ ಸಂಘದ ಅಧ್ಯಕ್ಷರಾಗಿ ಪೃಥ್ವಿರಾಜ್ ಕೊಠಾರಿ ನೇಮಕಗೊಂಡಿದ್ದಾರೆ. ಹಾಲಿ ಅಧ್ಯಕ್ಷ ಮೋಹಿತ್ ಭರಾತಿಯಾ ಅವರ ಸ್ಥಾನಕ್ಕೆ ಆಯ್ಕೆಯಾಗಿರುವ ಪೃಥ್ವಿರಾಜ್ ಅವರ ಅಧಿಕಾರಾವಧಿ 2019ರಿಂದ ಐದು ವರ್ಷಗಳ ಕಾಲ ಅಂದರೆ 2024ರವರೆಗೆ ಇರುತ್ತದೆ.

ಲೆಕ್ಕಪರಿಶೋಧಕ ಸುರೇಂದ್ರ ಮೆಹ್ತಾ ಅವರನ್ನು ರಾಷ್ಟ್ರೀಯ ಕಾರ್ಯದರ್ಶಿಯಾಗಿ ಮತ್ತು ಕೇತನ್ ಜಂಟಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಸಂಜಯ್ ಜೈನ್ ಅವರು ಕೋಶಾಧ್ಯಕ್ಷರಾಗಿದ್ದು, ಜಂಟಿ ಖಜಾಂಚಿಯಾಗಿ ನಿಮೇಶ್ ಚೋಕ್ಸಿ ಅವರನ್ನು ನೇಮಿಸಲಾಗಿದೆ.

ಪೃಥ್ವಿರಾಜ್ ಕೊಠಾರಿ ಅವರು ಕಳೆದ 30 ವರ್ಷಗಳಿಂದ ಕುಟುಂಬದ ವ್ಯವಹಾರವಾದ ಚಿನ್ನದ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದಾರೆ. ರಿದ್ದಿಸಿದ್ದಿ ಬುಲಿಯನ್ಸ್ ಲಿಮಿಟೆಡ್‍ನ ಪ್ರವರ್ತಕರಲ್ಲೊಬ್ಬರಾಗಿ ಕೊಠಾರಿಯವರು ಬಿಎಸ್1000ಗೆ ಅನುಗುಣವಾಗಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದು, 10 ಅಗ್ರಗಣ್ಯ ಅನ್‍ಲಿಸ್ಟೆಡ್ ಪಬ್ಲಿಕ್ ಕಂಪನಿಯನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ.

ಈ ಮೊದಲು ಕೊಠಾರಿಯವರು, ಮುಂಬೈ ಚಿನ್ನದ ಸಂಘ (ಬಿಬಿಎ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಬಿಬಿಎಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಾಗಿ ಬಿಂಬಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಭಾರತದಲ್ಲಿ ಚಿನ್ನದ ಇಟಿಎಫ್‍ಗಳನ್ನು ಪರಿಚಯಿಸುವಲ್ಲೂ ಕೊಠಾರಿ ಪ್ರಮುಖ ಪಾತ್ರ ವಹಿಸಿದ್ದರು.

ಅವರ ದೂರದೃಷ್ಟಿಯಿಂದಾಗಿ ಆರ್‍ಎಸ್‍ಬಿಎಲ್ ಯಶಸ್ವಿಯಾಗಿ ಭಾರತದ ಮೊಟ್ಟಮೊದಲ ಹಾಗೂ ಏಕೈಕ ಕೌಂಟರ್ ಮೂಲಕವೇ ಎಲೆಕ್ಟ್ರಾನಿಕ್ ಚಿನ್ನದ ವ್ಯಾಪಾರ ವ್ಯವಸ್ಥೆ ಆರ್‍ಎಸ್‍ಬಿಎಲ್ ಸ್ಪಾಟ್ ಜಾರಿಗೆ ತಂದಿದ್ದರು.

99 ವರ್ಷಗಳಷ್ಟು ಹಳೆಯದಾದ ಭಾರತೀಯ ಚಿನ್ನ ಹಾಗೂ ಆಭರಣಗಳ ಸಂಘ (ಐಬಿಜೆಎ), ಭಾರತದ ಹರಳು ಮತ್ತು ಆಭರಣ ಉದ್ಯಮದ ಅತ್ಯುನ್ನತ ಸಂಸ್ಥೆಯಾಗಿ ಬೆಳೆದಿದೆ. ಐಬಿಜೆಎ ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿದ್ದು, 27 ರಾಜ್ಯಗಳಲ್ಲಿ ಕಚೇರಿಗಳನ್ನು ಹೊಂದಿದೆ. ಐಬಿಜೆಎ ಇದೀಗ ಎಂಸಿಎಕ್ಸ್, ಎನ್‍ಎಸ್‍ಇ ಸ್ಪಾಟ್ ಎಕ್ಸ್‍ಜೇಂಜ್‍ಗೆ ಸಲಹಾ ಸಂಸ್ಥೆಯಾಗಿದ್ದು, ಬಿಎಸ್‍ಇ ಜತೆ ಸ್ಥಳದಲ್ಲೇ ವಿನಿಮಯಕ್ಕೆ ಒಡಂಬಡಿಕೆ ಮಾಡಿಕೊಂಡಿದೆ.

ಐಬಿಜೆಎಯನ್ನು ನೀತಿ ಆಯೋಗದಲ್ಲಿ ಕೂಡಾ ಸೇರಿಸಲಾಗಿದ್ದು, ಚಿನ್ನದ ಮಾರುಕಟ್ಟೆಯ ವರ್ಗಾವಣೆಗಾಗಿ ಸಲಹೆ ನೀಡಲು ಸೇರಿಸಿಕೊಳ್ಳಲಾಗಿದೆ. ಐಬಿಜೆಎ, ದೇಶೀಯ ಚಿನ್ನದ ಮಂಡಳಿಗೆ ಸಹ ಸಂಯೋಜಕ ಸಂಸ್ಥೆಯಾಗಿದೆ. ಆರ್‍ಬಿಐ, ಐಬ

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ