ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಾಫ್ ಮ್ಯಾರಥಾನ್ : ಕೀನ್ಯಾ ಓಟಗಾರರ ಪ್ರಾಬಲ್ಯ

ಈ ಸುದ್ದಿಯನ್ನು ಶೇರ್ ಮಾಡಿ

Delhi-02

ನವದೆಹಲಿ,ನ.20-ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ನಡೆದ ಹಾಫ್ ಮ್ಯಾರಥಾನ್ ಕ್ರೀಡಾಕೂಟದಲ್ಲಿ ಕೀನ್ಯಾ ಓಟಗಾರರು ಪ್ರಾಬಲ್ಯ ಮೆರೆದಿದ್ದಾರೆ. ಪುರುಷರ ವಿಭಾಗದಲ್ಲಿ ಎಂದಿನಂತೆ ಕೀನ್ಯಾ ಅಥ್ಲೀಟ್‍ಗಳೇ ಗೆಲುವಿನ ನಗೆ ಬೀರಿದ್ದಾರೆ. ಒಲಿಂಪಿಕ್ ಮ್ಯಾರಥಾನ್ ಚಾಂಪಿಯನ್ ಕೀನ್ಯಾದ ಕಿಪ್‍ಚೋಕಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಕಿಪ್‍ಚೋಕಿ ಅವರು 59 ನಿಮಿಷ 44 ಸೆಕೆಂಡ್‍ಗಳಲ್ಲಿ 21. 097 ಕಿ.ಮೀ ಗೆಲುವಿನ ಗೆರೆ ದಾಟಿ ಪ್ರಥಮ ಸ್ಥಾನ ಪಡೆದರು. ಇಥೋಪಿಯಾದ ಯಗ್ರಿಮ್ ದೆಮೆಲಶ್ 59 ನಿಮಿಷ 48 ಸೆಕೆಂಡ್ ಮತ್ತು ಕೀನ್ಯಾದ ಮತ್ತೊಬ್ಬ ಓಟಗಾರ ಅಗುಸ್ಟೈನ್ ಚೋಕಿಯ 1 ಗಂಟೆ 1 ಸೆಕೆಂಡ್ ಅವಧಿಯಲ್ಲಿ ಅನುಕ್ರಮವಾಗಿ 2 ಮತ್ತು 3ನೇ ಸ್ಥಾನ ಅಲಂಕರಿಸಿದ್ದಾರೆ.

ಇನ್ನು ಮಹಿಳೆಯರ ವಿಭಾಗದಲ್ಲಿ ಇಥೋಪಿಯಾದ ಡೆಗಿಫಾ 1 ಗಂಟೆ 7 ನಿಮಿಷ, 42 ಸೆಕೆಂಡ್‍ಗಳಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದರು. ಇಥೋಪಿಯಾದ ಮತ್ತೊಬ್ಬ ಮಹಿಳಾ ಓಟಗಾರ್ತಿ ಅಬ್ಬೆಲ್ ಯಶನಿಶ್ 1 ಗಂಟೆ 7 ನಿಮಿಷ, 52 ಸೆಕೆಂಡ್ ಮತ್ತು ಕೀನ್ಯಾದ ಹೆಲ್ಲಾ ಕಿಪ್ಚೋಗೆ  1 ಗಂಟೆ 8 ನಿಮಿಷ 11 ಸೆಕೆಂಡ್‍ಗಳಲ್ಲಿ ಕ್ರಮವಾಗಿ 2ನೇ ಮತ್ತು 3ನೇ ಸ್ಥಾನಗಳನ್ನು ಪಡೆದಿದ್ದಾರೆ.
ಆದರೆ ಈ ಕ್ರೀಡಾಕೂಟದಲ್ಲಿ ಭಾರತದ ಓಟಗಾರರು ನಿರಾಶದಾಯಕ ಪ್ರದರ್ಶನ ನೀಡಿದ್ದಾರೆ. 2013ರ ಮ್ಯಾರಥಾನ್ ಹಾಗೂ 2015ರ ಟಿಸಿಎಸ್ ವಲ್ರ್ಡ್ 10ಕೆ ಚಾಂಪಿಯನ್ ಆಗಿದ್ದ ಭಾರತದ ಜಿ.ಲಕ್ಷ್ಮಣ್ ಈ ಕ್ರೀಡಾಕೂಟದಲ್ಲಿ 1 ಗಂಟೆ 4 ನಿಮಿಷ 32 ಸೆಕೆಂಡ್‍ಗಳಲ್ಲಿ ಗುರಿಮುಟ್ಟಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

► Follow us on –  Facebook / Twitter  / Google+

 

Facebook Comments

Sri Raghav

Admin