ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಟ್ಟ ಮಂಜಿನಿಂದ ವಿಮಾನಗಳ ಹರಾಟಕ್ಕೆ ಅಡ್ಡಿ
ನವದೆಹಲಿ, ಡಿ.1-ರಾಜಧಾನಿ ಮೇಲೆ ಆವರಿಸಿರುವ ದಟ್ಟ ಮಂಜು ಎರಡನೇ ದಿನವಾದ ಇಂದು ಕೂಡ ಮುಂದುವರಿದಿದ್ದು, ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ವಿಮಾನಗಳ ಹಾರಾಟಕ್ಕೆ ಅಡ್ಡಿಯಾಯಿತು. ಇಡೀ ಐಜಿಐ ಏರ್ಪೋರ್ಟ್ ಮಂಜಿನಿಂದ ಆವೃತವಾಗಿದ್ದು, ರನ್ವೇ ಕಾಣದಿರುವ ಕಾರಣದಿಂದಾಗಿ ನಾಲ್ಕು ದೇಶೀಯ ವಿಮಾನಗಳ ಹಾರಾಟದ ದಿಕ್ಕನ್ನು ಇತರ ವಿಮಾನ ನಿಲ್ದಾಣಗಳಿಗೆ ಬದಲಿಸಲಾಯಿತು. ದೆಹಲಿ ವಿಮಾನನಿಲ್ದಾಣದಲ್ಲಿ ಮಂಜು ಮುಸುಕಿದ ವಾತಾವರಣದಿಂದ ವಿಮಾನಗಳ ಹಾರಾಟಕ್ಕೆ ಅಡಚಣೆಯಾಗಿದೆ. ಆದರೆ ಯಾವುದೇ ವಿಮಾನಗಳನ್ನು ರದ್ದುಗೊಳಿಸಿಲ್ಲ ಎಂದು ಏರ್ಪೋರ್ಟ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು ಮುಂಜಾನೆಯಿಂದಲೇ ವಿಮಾನನಿಲ್ದಾಣವು ಮಂಜು ಹೊದ್ದಿರುವಂತೆ ಕಂಡುಬರುತ್ತಿದೆ. ರನ್ವೇ ಮೇಲೆ ಮಂಜಿನ ಮುಸುಕು ಹರಡಿದೆ. ಉಷ್ಣಾಂಶದಲ್ಲಿ ಇಳಿಕೆ ಕಂಡುಬಂದಿದೆ ಎಂದು ಐಜಿಐನ ವಾಯು ಸಂಚಾರ ನಿಯಂತ್ರಣ ವಿಭಾಗದ ಅಧಿಕಾರಿ ಹೇಳಿದ್ದಾರೆ. ದೆಹಲಿಗೆ ಇಂದು ಬೆಳಗ್ಗೆ ಬರಬೇಕಿದ್ದ ನಾಲ್ಕು ಸ್ಥಳೀಯ ವಿಮಾನಗಳ ಸಂಚಾರ ದಿಕ್ಕನ್ನು ಇತರ ಏರೋಡ್ರೂಂಗಳ ಕಡೆಗೆ ಬದಲಿಸಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… : Eesanje News 24/7 ನ್ಯೂಸ್ ಆ್ಯಪ್ – Click Here to Download