ರಾಸಲೀಲೆ ಪ್ರಕರಣ : ಸಚಿವ ಮೇಟಿಯವರಿಗೆ ಸಿಗದ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

meti9

ಬೆಂಗಳೂರು, ಡಿ.12-ರಾಸಲೀಲೆ ಪ್ರಕರಣದಲ್ಲಿ ಸಿಲುಕಿರುವ ಅಬಕಾರಿ ಸಚಿವ ಎಚ್.ವೈ.ಮೇಟಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುವ ಸಂಬಂಧ ನಡೆಸಿದ ಪ್ರಯತ್ನ ಮಧ್ಯಾಹ್ನದವರೆಗೂ ಫಲಿಸಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಧ್ಯಾಹ್ನದವರೆಗೂ ಯಾರಿಗೂ ಭೇಟಿಗೆ ಅವಕಾಶ ನೀಡಿಲ್ಲ. ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸ್ಪಷ್ಟನೆ ನೀಡಿದ್ದು, ನನಗೂ ಅವರಿಗೂ ಯಾವುದೇ ಅಕ್ರಮಸಂಬಂಧವಿಲ್ಲವೆಂದು ಹೇಳಿದ್ದಾರೆ. ಅಲ್ಲದೆ, ವಿಡಿಯೋ ಸಾಕ್ಷ್ಯಾಧಾರಗಳು ಯಾವುದೂ ಲಭ್ಯವಾಗಿಲ್ಲ. ಆರ್‍ಟಿಐ ಕಾರ್ಯಕರ್ತರೊಬ್ಬರು ಆಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ಈ ಪ್ರಕರಣವನ್ನು ಇಟ್ಟುಕೊಂಡು ಮುಖ್ಯಮಂತ್ರಿಗಳ ಕುರ್ಚಿಗೆ ಕುತ್ತು ತರುವ ಪ್ರಯತ್ನವನ್ನು ರಾಜಕೀಯ ವಿರೋಧಿಗಳು ಹೆಣೆಯಲಾರಂಭಿಸಿದ್ದಾರೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣುವವರೆಗೂ ಯಾರೊಂದಿಗೂ ಚರ್ಚಿಸದಿರಲು ಸಿಎಂ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.ಅಬಕಾರಿ ಸಚಿವ ಎಚ್.ವೈ.ಮೇಟಿ ಅವರ ವಿರುದ್ಧ ರಾಸಲೀಲೆ ಪ್ರಕರಣ ತಳಕು ಹಾಕಿಕೊಂಡಿದ್ದು, ನಿನ್ನೆ ಮಾಧ್ಯಮಗಳಲ್ಲಿ ಈ ಸುದ್ದಿ ಹರಿದಾಡಿತ್ತು.ವಿಪಕ್ಷಗಳು ಅವರ ರಾಜೀನಾಮೆಗೂ ಕೂಡ ಒತ್ತಾಯಿಸಿದ್ದರು. ಆರ್‍ಟಿಐ ಕಾರ್ಯಕರ್ತ ರಾಜಶೇಖರ್ ಎಂಬುವರಿಗೆ ಮೇಟಿ ಬೆಂಬಲಿಗರು ಬೆದರಿಕೆ ಹಾಕಿದ್ದು, ಸಿಡಿ ಬಿಡುಗಡೆಗೊಳಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದಿದ್ದಾರೆ. ಹೀಗಾಗಿ ರಾಜಶೇಖರ್ ಅವರು ಬಳ್ಳಾರಿಯಲ್ಲಿ ಇವರ ವಿರುದ್ಧ ದೂರು ಕೂಡ ನೀಡಿದ್ದರು.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin