ರಾಸಾಯನಿಕ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ; ನಾಲ್ವರ ಸಾವು, ಅನೇಕರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Blast--02

ಮುಂಬೈ, ಮಾ.9-ಮಹಾರಾಷ್ಟ್ರದಲ್ಲಿ ಅಗ್ನಿ ದುರಂತಗಳು ಮರುಕಳಿಸುತ್ತಿದ್ದು, ಪಲ್‍ಘರ್‍ನ ತಾರಾಪುರದ ಖಾಸಗಿ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ನಿನ್ನೆ ಮಧ್ಯರಾತ್ರಿ ಸಂಭವಿಸಿದ ಭೀಕರ ಬೆಂಕಿ ಮತ್ತು ಸ್ಫೋಟ ದುರ್ಘಟನೆಯಲ್ಲಿ ಕನಿಷ್ಠ ನಾಲ್ವರು ಮೃತಪಟ್ಟು ಅನೇಕರು ತೀವ್ರ ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸ್ಫೋಟದ ತೀವ್ರತೆ ಎಷ್ಟು ಪ್ರಬಲವಾಗಿತ್ತೆಂದರೆ 10 ಕಿ.ಮೀ. ವ್ಯಾಪ್ತಿವರೆಗೆ ಶಬ್ಧ ಕೇಳಿ ಬಂದಿತ್ತು. ಭಾರೀ ಬಾಂಬ್ ಸ್ಫೋಟಗೊಂಡ ರೀತಿಯಲ್ಲಿ ಶಬ್ಧ ಕೇಳಿತು. ಮನೆಗಳು ಮತ್ತು ಕಟ್ಟಡಗಳು ಕಂಪಿಸಿದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಮುಂಬೈನಿಂದ 150 ಕಿ.ಮೀ.ದೂರದಲ್ಲಿರುವ ಪಲ್‍ಘರ್‍ನ ರಾಸಾಯನಿಕ ತಯಾರಿಕಾ ಘಟಕದಲ್ಲಿ ನಿನ್ನೆ ತಡರಾತ್ರಿ 11.15ರಲ್ಲಿ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿಯಿಂದ ಭಾರೀ ಸ್ಫೋಟ ಸಂಭವಿಸಿ ಅಕ್ಕಪಕ್ಕದ ಕಟ್ಟಡಗಳಿಗೂ ವ್ಯಾಪಿಸಿತು. ಈ ದುರಂತದಲ್ಲಿ ನಾಲ್ವರು ಮೃತಪಟ್ಟು ಅನೇಕರು ಗಾಯಗೊಂಡರು.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಮತ್ತು ರಕ್ಷಣಾ ಕಾರ್ಯಕರ್ತರು ಕಟ್ಟಡಗಳ ಒಳಗೆ ಸಿಲುಕಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಿದರು ಎಂದು ಪಲ್‍ಘರ್ ಪೆÇಲೀಸ್ ಅಧಿಕಾರಿ ಪ್ರಮೋದ್ ಪವಾರ್ ತಿಳಿಸಿದ್ದಾರೆ. ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

Facebook Comments

Sri Raghav

Admin