ರಾಹುಲ್‌ ಗಾಂಧಿ ನಾಳೆಯಿಂದ ಅಮೇಥಿಗೆ ಮೂರು ದಿನಗಳ ಪ್ರವಾಸ

ಈ ಸುದ್ದಿಯನ್ನು ಶೇರ್ ಮಾಡಿ

rahul
ನವದೆಹಲಿ, ಆ.30- ಕಾಂಗ್ರೆಸ್ ಭದ್ರಕೋಟೆ ಯಾಗಿರುವ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ನಾಳೆಯಿಂದ ಮೂರು ದಿನಗಳ ಪ್ರವಾಸ ಕೈಗೊಳ್ಳಲಿದ್ದು, ಪಕ್ಷದಲ್ಲಿ ಚಟುವಟಿಕೆ ಬಿರುಸುಗೊಂಡಿದೆ.  ಅಮೇಥಿ ಸಂಸದರೂ ಆದ ರಾಹುಲ್ ಆ.31ರಿಂದ ಸೆ.2ರ ವರೆಗೆ ಭೇಟಿ ನೀಡಲಿದ್ದಾರೆ . ಈ ಕುರಿತು ಟ್ವೀಟ್ ಮಾಡಿರುವ ಅವರು ಪ್ರತಿಯೊಬ್ಬರನ್ನೂ ಭೇಟಿ ಮಾಡುವ ಬಯಕೆ ಹೊಂದಿದ್ದೇನೆ ಎಂದಿದ್ದಾರೆ.

ನಾಳೆ ಸಂಜೆ ಅಮೇಥಿ ತಲುಪಲಿರುವ ರಾಹುಲ್ ಮುಂದಿನ ಮುನ್ಷಿಗಂಜ್ ಗೆಸ್ಟ್‌ಹೌಸ್‌ನಲ್ಲಿ ಭೇಟಿ ಮಾಡುವರು. ಅದೇ ದಿನ ಜಗದೀಶ್‌ಪುರ್ ವಿಧಾನಸಭಾ ಕ್ಷೇತ್ರದ ಜಫರ್‌ಗಂಜ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡುವರು.  ಮೂರು ದಿನಗಳ ಭೇಟಿ ವೇಳೆ ಅನೇಕ ಕಾರ್ಯಕ್ರಮಗಳು ಮತ್ತು ಸಭೆಗಳಲ್ಲಿ ಅವರು ಪಾಲ್ಗೊಳ್ಳುವರು.

► Follow us on –  Facebook / Twitter  / Google+

Facebook Comments

Sri Raghav

Admin