ರಾಹುಲ್ಗಾಂಧಿ ಸಹಿಯನ್ನೇ ನಕಲು ಮಾಡಿ ಪರಮೇಶ್ವರ್ ಅವರನ್ನೇ ಯಾಮಾರಿಸಿದ ‘ಬಲ್ ನನ್ ಮಗ ‘…!
ಬೆಂಗಳೂರು, ಅ.23-ಬೆಳಗಾವಿ ಮೂಲದ ಮಹಾನ್ ಭೂಪ ಸಂತೋಷ್ ಪಾಟೀಲ್ ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿಯವರ ಸಹಿಯನ್ನೇ ನಕಲು ಮಾಡಿ ವಾಯುವ್ಯ ಸಾರಿಗೆ ನಿಗಮದ ಅಧ್ಯಕ್ಷರಗಿರಿಯ ಆದೇಶದ ಪ್ರತಿಯನ್ನು ತಂದಿದ್ದಾನೆ. ಈ ಬಗ್ಗೆ ತನಿಖೆ ನಡೆಸುವಂತೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ. ಯಾರು ಈ ಸಂತೋಷ್ ಪಾಟೀಲ್, ರಾಹುಲ್ಗಾಂಧಿಯವರ ಸಹಿಯನ್ನೇ ನಕಲು ಮಾಡಿ ಅಧ್ಯಕ್ಷ ಪಟ್ಟ ಗಿಟ್ಟಿಸಿಕೊಳ್ಳುವ ಹುನ್ನಾರ ಮಾಡಿರುವ ಪುಣ್ಯಾತ್ಮ ಈತನ ಹಿನ್ನೆಲೆ ತಿಳಿದುಕೊಂಡು, ಕ್ರಮ ಕೈಗೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆದೇಶ ನೀಡಿದ್ದಾರೆ.
ವಾಯುವ್ಯ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನಕ್ಕೆ ನೇಮಿಸುವಂತೆ ರಾಹುಲ್ಗಾಂಧಿಯವರು ಆದೇಶ ನೀಡಿದ್ದಾರೆ ಎಂಬ ಪ್ರತಿ ನೋಡುತ್ತಿದ್ದಂತೆ ಅವರಿಗೆ ಆಶ್ಚರ್ಯವಾಗಿದೆ. ಎಲ್ಲಾ ನಿಗಮಗಳಿಗೆ ನೇಮಕಾತಿ ನಡೆಯುತ್ತಿರುವ ಸಂದರ್ಭದಲ್ಲಿ ವಿಶೇಷವಾಗಿ ಇವರನ್ನು ನೇಮಿಸಲು ರಾಹುಲ್ ಗಾಂಧಿಯವರು ಹೇಗೆ ಆದೇಶಿಸಿದರು ಎಂಬ ಅನುಮಾನದ ಹಿನ್ನೆಲೆಯಲ್ಲಿ ತನಿಖೆಗೆ ಸೂಚಿಸಿದ್ದಾರೆ.
ಕಳೆದ ಸೆಪ್ಟೆಂಬರ್ 17 ರಂದು ರಾಹುಲ್ಗಾಂಧಿ ಸಹಿವುಳ್ಳ ಈ ಆದೇಶ ಪತ್ರ ಬಂದಿದೆ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಹೆಸರಿನಲ್ಲಿ ಸೃಷ್ಟಿಸಿದ್ದ ನಕಲಿ ಶಿಫಾರಸ್ಸು ಪತ್ರ ಹಿನ್ನೆಲೆಯಲ್ಲಿ ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ.
► Follow us on – Facebook / Twitter / Google+