ರಾಹುಲ್ ಜೊತೆ ದ್ವನಿಗೂಡಿಸಿದ ಲಾಲೂ : ಮೋದಿ ವಿರುದ್ಧ ತನಿಖೆಗೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Modi-Lalooo

ನವದಹಲಿ, ಡಿ.23- ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2013-14ರ ಅವಧಿಯಲ್ಲಿ ಅವರಿಗೆ ದೊಡ್ಡ ಮೊತ್ತದ ಲಂಚ ಪಾವತಿಯಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಬೆಂಬಲ ಸೂಚಿಸಿದ್ದಾರೆ. ಈ ಕುರಿತು ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ತನಿಖೆ ನಡೆಯಬೇಕೆಂದೂ ಆಗ್ರಹಿಸಿದ್ದಾರೆ.  ರಾಹುಲ್ ಮಾಡಿರುವ ಆರೋಪದಿಂದಾಗಿ ಪ್ರಧಾನಿ ಮೋದಿ ಈಗ ಸಂಪೂರ್ಣವಾಗಿ ಸಿಕ್ಕಿ ಹಾಕಿಕೊಂಡಿದ್ದು, ಅವರು ಈಗ ದೇಶಕ್ಕೆ ಈ ಬಗ್ಗೆ ಸೂಕ್ತ ಉತ್ತರ ನೀಡಬೇಕಾದ ಅಗತ್ಯವಿದೆ ಎಂದು ಲಾಲೂ ಹೇಳಿದ್ದಾರೆ.

ರಾಹುಲ್ ಸರಿಯಾದ ಸಾಕ್ಷ್ಯಾಧಾರ ಇಲ್ಲದೇ ಪ್ರಧಾನಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರಲಾರರು. ಆದುದರಿಂದ ಈ ಕುರಿತು ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.  ಆದಿತ್ಯ ಬಿರ್ಲಾ ಮತ್ತು ಸಹರಾ ಗ್ರೂಪ್ ನರೇಂದ್ರ ಮೋದಿ ಅವರಿಗೆ 40 ಕೋಟಿ ರೂ. ಲಂಚ ನೀಡಿರುವುದಾಗಿ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಹೀಗಾಗಿ ಮೋದಿ ಲಂಚ ಹಗರಣದಲ್ಲಿ ಸಿಲುಕಿದ್ದಾರೆ. ಆದುದರಿಂದ ಅವರು ಈ ಕುರಿತ ರಾಷ್ಟ್ರದ ಜನತೆಗೆ ಉತ್ತರ ನೀಡಬೇಕು. ಈ ಬಗ್ಗೆ ಬಿಜೆಪಿ ವಕ್ತಾರರು ಮೋದಿ ಪರವಾಗಿ ಯಾವುದೇ ಸಮರ್ಥನೆಯೊಂದಿಗೆ ಮುಂದೆ ಬಂದರೆ ಅದು ನಿಜಕ್ಕೂ ಅನುಚಿತ ಮತ್ತು ಅನಪೇಕ್ಷಣೀಯವಾಗಿರುತ್ತದೆ ಎಂದು ಲಾಲೂ ಸುದ್ದಿಗಾರರಿಗೆ ತಿಳಿಸಿದ್ಧಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin