ರಾಹುಲ್ ಪಟ್ಟಾಭಿಷೇಕದ ನಂತರ ಸೋನಿಯಾ ಗಾಂಧಿ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

Rahul--01

ನವದೆಹಲಿ, ಡಿ.16-ಇದೊಂದು ನೈತಿಕ ಯುದ್ಧ. ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ. ದೇಶದ ಜನತಂತ್ರ ಮೌಲ್ಯಗಳ ರಕ್ಷಣೆಗಾಗಿ ಅಗತ್ಯವಾದರೆ ಯಾವುದೇ ತ್ಯಾಗಕ್ಕೂ ಸಿದ್ಧರಾಗಿರಬೇಕು ಎಂದು ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಹೇಳಿದ್ದಾರೆ. ದೆಹಲಿಯಲ್ಲಿ ಇಂದು ತಮ್ಮ ಪುತ್ರ ರಾಹುಲ್‍ಗಾಂಧಿ ಅವರಿಗೆ ಪಕ್ಷದ ಸಾರಥ್ಯ ಹಸ್ತಾಂತರಿಸಿದ ನಂತರ ನಿರ್ಗಮಿತ ಅಧ್ಯಕ್ಷರಾಗಿ ವಿದಾಯ ಭಾಷಣ ಮಾಡಿದ ಅವರು, ಇಂದು ದೇಶದಲ್ಲಿ ಆತಂಕಕಾರಿ ವಾತಾವರಣ ಸೃಷ್ಟಿಯಾಗಿದೆ. ಆದರೆ ನಾವು ಇದಕ್ಕೆ ಹೆದರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.

20 ವರ್ಷಗಳ ಹಿಂದೆ ನಾನು ಕಾಂಗ್ರೆಸ್ ಅಧ್ಯಕ್ಷೆಯಾದಾಗ ಕಾಂಗ್ರೆಸ್ ದುರ್ಬಲವಾಗಿತ್ತು. ಸಂಕಷ್ಟದ ಸಮಯದಲ್ಲಿ ಪಕ್ಷದ ಸಾರಥ್ಯ ವಹಿಸಿದ್ದ ನನ್ನ ಮುಂದೆ ದೊಡ್ಡ ಸವಾಲುಗಳು ಇತ್ತು. ಆರಂಭದಲ್ಲಿ ನಾನು ಹೆದರಿದ್ದರೂ, ನಂತರ ಧೃತಿಗೆಡದೇ ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸಿದೆ ಎಂದು ಹೇಳಿದರು.

Facebook Comments

Sri Raghav

Admin