ರಾಹುಲ್, ಬಿಜೆಪಿ ರೋಡ್ ಶೋಗಳಿಗೆ ಪೊಲೀಸ್ ಕೊಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Modi-Rally--01

ಅಹಮದಾಬಾದ್, ಡಿ.11-ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಬಿಜೆಪಿ ಮುಖಂಡರು ನಾಳೆ ಗುಜರಾತಿನ ಅಹಮದಾಬಾದ್‍ನಲ್ಲಿ ನಡೆಸಲು ಉದ್ದೇಶಿಸಿರುವ ರೋಡ್ ಶೋಗಳಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.  ಸಂಚಾರ ಸಮಸ್ಯೆ, ಸೂಕ್ಷ್ಮ ಪ್ರದೇಶಗಳು ಮತ್ತು ಕಿರಿದಾದ ರಸ್ತೆಗಳ ಕಾರಣ ನೀಡಿದ ಪೊಲೀಸ್ ಆಯುಕ್ತ ಎ.ಕೆ.ಸಿಂಗ್ ಅನುಮತಿ ನಿರಾಕರಿಸಿದ್ದಾರೆ.  ರಾಹುಲ್ ಗಾಂಧಿ ನೇತೃತದ ಕಾಂಗ್ರೆಸ್ ಜಗನ್ನಾಥ್ ದೇವಸ್ಥಾನದಿಂದ ಮೆನ್ಕೋ ಪ್ರದೇಶದವರೆಗೆ ರೋಡ್ ಶೋ ನಡೆಸಿ ಮಾರ್ಗ ಮಧ್ಯೆ ಸಭೆಗಳನ್ನು ಆಯೋಜಿಸಲು ಅನುಮತಿ ಕೇಳಿದೆ. ಇತ್ತ ಬಿಜೆಪಿ ಧರೀಂದರ್ ದೆರಾಸರ್‍ನಿಂದ ಬಾಪು ನಗರ್‍ವರೆಗೆ ರೋಡ್ ಶೋ ನಡೆಸಲು ಉದ್ದೇಶಿಸಿತ್ತು.

Facebook Comments

Sri Raghav

Admin