ರಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳಿಗೆ ಸಲ್ಮಾನ್ ಧನ ಸಹಾಯ

ಈ ಸುದ್ದಿಯನ್ನು ಶೇರ್ ಮಾಡಿ

salmana

ಮುಂಬೈ. ಆ.18 : ಬಾಲಿವುಡ್ ನ ಸುಲ್ತಾನ್ ಸಲ್ಮಾನ್ ಖಾನ್ ರಿಯೊ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳಿಗೆ ತಲಾ ಒಂದು ಲಕ್ಷದ ಒಂದು ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ. . ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸಲ್ಮಾನ್ ಖಾನ್, ರಿಯೊ ಒಲಂಪಿಕ್ಸ್ ನಲ್ಲಿ ಪಾಲ್ಗೊಂಡ ಭಾರತೀಯ ಕ್ರೀಡಾಪಟುಗಳಿಗೆ ಚೆಕ್ ನೀಡಲು ಮುಂದಾಗಿದ್ದಾರೆ.  ಪ್ರತಿಯೊಬ್ಬ ಭಾರತೀಯ ಕ್ರೀಡಾಪಟುವಿಗೆ ಒಂದು ಲಕ್ಷದ ಒಂದು ಸಾವಿರ ರೂಪಾಯಿ ನೀಡುವುದಾಗಿ ಸಲ್ಮಾನ್ ಹೇಳಿದ್ದಾರೆ. ಟ್ವಿಟರ್ ನಲ್ಲಿ ಸಲ್ಮಾನ್ ಖಾನ್ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ರಿಯೊದ ಗುಡ್ವಿಲ್ ರಾಯಭಾರಿಯಾಗಿರುವ ಸಲ್ಮಾನ್ ಖಾನ್, ಕ್ರೀಡಾಪಟುಗಳಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕೆಂದು ಟ್ವೀಟ್ ಮಾಡಿದ್ದಾರೆ. ರಿಯೊ ಒಲಂಪಿಕ್ಸ್ ನಲ್ಲಿ 118 ಭಾರತೀಯ ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin