ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಅಪಹರಿಸಿದ್ದ ಬಳ್ಳಾರಿ ನಾಗ ಸೇರಿ 8 ಮಂದಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Ballary-Naga

ಬೆಂಗಳೂರು,ಆ.25- ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಫೈನಾನ್ಸ್ ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಇಬ್ಬರನ್ನು ಅವರ ಕಾರಿನಲ್ಲೇ ಕಿಡ್ನ್ಯಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಬಳ್ಳಾರಿ ನಾಗರಾಜು ಸೇರಿದಂತೆ ಎಂಟು ಮಂದಿಯನ್ನು ಈಶಾನ್ಯ ವಿಭಾಗದ ಅಮೃತಹಳ್ಳಿ ಪೊಲೀಸರು ಬಂಧಿಸಿ ಎರಡು ರಿವಾಲ್ವರ್, ಬಿಎಂಡಬ್ಲ್ಯೂ ಕಾರು, 9 ಲಕ್ಷ ಹಣ ವಶಪಡಿಸಿಕೊಂಡಿದ್ದಾರೆ.   ಬಳ್ಳಾರಿ ಮೂಲದ ನಾಗರಾಜು, ನೂರ್ ಮೊಹಮ್ಮದ್, ಇಕ್ಬಾಲ್ ಹುಸೇನ್, ಮಹಿಳೆ ಇಂಜುಮುರಿ, ಬೆಂಗಳೂರಿನ ಶ್ರೀರಾಮರೆಡ್ಡಿ , ಅರುಣ್ ರಾಜ್, ಕಾಂತರಾಜ್, ಶಶಾಂಕ್ ಬಂಧಿತ ಅಪಹರಣಕಾರರು.   ರಿಯಲ್ ಎಸ್ಟೇಟ್ ಉದ್ಯಮಿಗಳಾದ ಮುತ್ತು ಕುಮಾರ್ ಮತ್ತು ಮದನ್ ಕುಮಾರ್ ಎಂಬುವರು ತಮಿಳುನಾಡಿನಿಂದ 10 ಲಕ್ಷ ರೂ. ಬೆಲೆಯ ಬಿಎಂಡಬ್ಲ್ಯೂ ಕಾರಿನಲ್ಲಿ ಆ.21ರಂದು ಬೆಳಗಿನ ಜಾವ 2 ಗಂಟೆಗೆ ಹೆಬ್ಬಾಳ ರಿಂಗ್ರಸ್ತೆಯ ಕರಿಯಣ್ಣನ ಪಾಳ್ಯದಲ್ಲಿರುವ ಪ್ರಕೃತಿ ಕ್ರಾಸ್ ರೋಡ್ ಅಪಾರ್ಟ್ಮೆಂಟ್ ಬಳಿ ಕಾರು ನಿಲ್ಲಿಸಿ ಇವರಿಬ್ಬರು ಇಳಿಯುತ್ತಿದ್ದಂತೆ ಅಪಹರಣಕಾರರು ಬೈಕ್ ಮತ್ತು ಎಸ್ಟೀಮ್ ಕಾರಿನಲ್ಲಿ ಬಂದು ಹಲ್ಲೆ ನಡೆಸಿ ಅವರ ಕಾರಿನಲ್ಲೇ ಅಪಹರಿಸಿದ್ದರು.

ಈ ವೇಳೆ ಗಾಯಗೊಂಡಿದ್ದ ಮಣಿಕಂಠನ್ ಎಂಬುವರು ಚಿಕ್ಸಿತೆ ಪಡೆದು ಪೊಲೀಸರಿಗೆ ದೂರು ನೀಡಿದ್ದರು.   ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅಪಹರಣಕಾರರ ಪತ್ತೆಗಾಗಿ ತಂಡ ರಚಿಸಿ ಕಾರ್ಯೋನ್ಮುಖರಾದಾಗಿ ಎಂಟು ಮಂದಿಯನ್ನು ಬಂಧಿಸಿ, ಅಪಹರಣಕ್ಕೊಳಗಾಗಿದ್ದ ಇಬ್ಬರು ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ರಕ್ಷಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin