ರಿಯಾದ್‍ನಲ್ಲಿ ಅಮೆರಿಕ ಶಾಲೆಯೊಂದರ ಮೇಲೆ ಗುಂಡಿನ ದಾಳಿ : ಇಬ್ಬರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Kingdom-Schoolkl

ರಿಯಾದ್, ಜೂ. 1- ಸೌದಿಯ ರಿಯಾದ್‍ನ ಅಮೆರಿಕ ಶಾಲೆಯೊಂದರ ಮೇಲೆ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಅಮೆರಿಕ ಪ್ರಜೆ ಸೇರಿದಂತೆ ಇಬ್ಬರು ಮೃತಪಟ್ಟು, ಕೆಲವರು ಗಾಯಗೊಂಡಿದ್ದಾರೆ.   ಕಿಂಗ್‍ಡಂ ಸ್ಕೂಲ್‍ನಲ್ಲಿ ಈ ದಾಳಿ ನಡೆದಿದ್ದು, ಶಾಲೆಯ ಮ್ಯಾನೇಜರ್ ಹಾಗೂ ಸೌದಿ ಪ್ರಜೆಯೊಬ್ಬ ಹತರಾಗಿದ್ದಾರೆ. ಬಂದೂಕುದಾರಿ ಆಕ್ರಮಣ ನಡೆಸಿದಾಗ ಶಾಲೆಯಲ್ಲಿ ವಿದ್ಯಾರ್ಥಿಗಳು ಇರಲಿಲ್ಲ ಎಂದು ಅಮೆರಿಕನ್ ರಾಯಭಾರಿ ಕಚೇರಿ ತಿಳಿಸಿದೆ.ಅಮೆರಿಕದ ಸಹಯೋಗದಲ್ಲಿ ಸೌದಿ ಉದ್ಯಮಿ ಮತ್ತು ರಾಜಕುಮಾರ ಅಲ್ ವಲೀದ್ ಬಿನ್ ತಲಾಲ್ ಅವರಿಗೆ ಸೇರಿದ ಕಂಪನಿಯೊಂದು ಈ ಶಾಲೆಯನ್ನು ನಡೆಸುತ್ತಿದೆ.   ಶಾಲೆಯಿಂದ ಹೊರ ಹಾಕಲ್ಪಟ್ಟಿದ್ದ ಇರಾಕಿ ಶಿಕ್ಷಕನೊಬ್ಬ ಈ ಕೃತ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin