ರಿಯಾದ್‍ನಲ್ಲಿ ಸೌದಿ ರಾಜಕುಮಾರನಿಗೆ ಮರಣದಂಡನೆ..!

ಈ ಸುದ್ದಿಯನ್ನು ಶೇರ್ ಮಾಡಿ

KIng-01

ಬೈರುತ್, ಲೆಬನಾನ್, ಅ.19- ಕಳೆದ ಮೂರು ವರ್ಷಗಳ ಹಿಂದೆ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಂದ ಸೌದಿಯ ರಾಜಕುಮಾರನೊಬ್ಬನಿಗೆ ರಾಜಧಾನಿ ರಿಯಾದ್‍ನಲ್ಲಿ ಮರಣದಂಡನೆ ವಿಧಿಸಲಾಗಿದೆ. ನಾಲ್ಕು ದಶಕಗಳಲ್ಲಿ ರಾಜ ಮನೆತನದ ಓರ್ವ ಸದಸ್ಯನಿಗೆ ಇಂಥ ಶಿಕ್ಷೆ ನೀಡಿರುವುದು ಇದೇ ಮೊದಲ. ರಾಜಕುಮಾರ್ ತುರ್ಕಿ ಬಿನ್ ಸೌದ್ ಬಿನ್ ತುರ್ಕಿ ಬಿನ್ ಸೌದ್ ಅಲ್-ಕಬೀರ್ ಅವರಿಗೆ ಮರಣದಂಡನೆ ಜಾರಿಗೊಳಿಸಲಾಗಿದೆ ಎಂದು ಸರ್ಕಾರಿ ವಾರ್ತಾ ಸಂಸ್ಥೆ ತಿಳಿಸಿದೆ. ಆದರೆ ರಾಜಕುಮಾರನಿಗೆ ಯಾವ ರೀತಿ ಮರಣದಂಡನೆ ನೀಡಲಾಯಿತು ಎಂಬುದನ್ನು ತಿಳಿಸಿಲ್ಲ. ಸೌದಿ ಅರೇಬಿಯಾದಲ್ಲಿ ಬಹುತೇಕ ಅಪರಾಧಿಗಳಿಗೆ ಸಾರ್ವಜನಿಕ ಚೌಕದಲ್ಲಿ ಶಿರಚ್ಚೇದ ಮಾಡಿ ಮರಣದಂಡನೆ ವಿಧಿಸಲಾಗುತ್ತದೆ.

ಮೂರು ವರ್ಷಗಳ ಹಿಂದೆ ಹೊಡೆದಾಟದ ವೇಳೆ ರಾಜಕುಮಾರ ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದ.  ರಾಜಕುಮಾರನಿಗೆ ಮರಣದಂಡನೆ ವಿಧಿಸಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂಥ ಒಂದು ಘಟನೆ ನಡೆಯುತ್ತದೆ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೆಲವರು ಪ್ರತಿಕ್ರಿಯಿಸಿದರೆ, ಕಾನೂನು ದೃಷ್ಟಿಯಲ್ಲಿ ಎಲ್ಲರೂ ಒಂದೇ ಎಂಬ ನ್ಯಾಯದೇವತೆಯ ನಿರ್ಣಯವನ್ನು ಇದು ಎತ್ತಿ ಹಿಡಿದಿದೆ ಎಂದು ಕೆಲವರು ಹೇಳಿದ್ದಾರೆ. ಸಾಮಾನ್ಯನಿಗೂ ಮತ್ತು ರಾಜಮನೆತನದವರಿಗೂ ಶರಿಯಾ ಕಾನೂನು ಒಂದೇ ಎಂದು ಇನ್ನೂ ಕೆಲವರು ವಿಶ್ಲೇಷಿಸಿದ್ದಾರೆ. ಇಸ್ಲಾಂ ಧಾರ್ಮಿಕ ಮುಖಂಡರು ಇದು ದೈವ ಇಚ್ಚೆ ಎಂದು ಬಣ್ಣಿಸಿದ್ದಾರೆ.

ರಾಜಕುವರನ ಮರಣದಂಡನೆಯೊಂದಿಗೆ ಈ ವರ್ಷ ಇದುವರೆಗೆ 143 ಮಂದಿ ಶಿರಚ್ಛೇದನಕ್ಕೆ ಒಳಗಾಗಿದ್ದಾರೆ. ತನ್ನ ಚಿಕ್ಕಪ್ಪ ದೊರೆ ಫೈಸಲ್‍ರನ್ನು ಕಗ್ಗೊಲೆ ಮಾಡಿದ ಆರೋಪದ ಮೇಲೆ 1975ರಲ್ಲಿ ರಾಜಕುಮಾರ್ ಫೈಸರ್ ಬಿನ್ ಮುಸಾಯಿದ್ ಅಲ್ ಸೌದ್‍ಗೆ ಮರಣದಂಡನೆ ವಿಧಿಸಲಾಗಿತ್ತು.  ಕೊಲೆ ಮತ್ತು ಮಾದಕವಸ್ತು ಕಳ್ಳಸಾಗಣೆ ಅಪರಾಧಗಳಿಗಾಗಿ ಸೌದಿ ಅರೇಬಿಯಾದಲ್ಲಿ ಬಹುತೇಕ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತದೆ. ಕಳೆದ ಜನವರಿಯಲ್ಲಿ ಶಿಯಾ ಧರ್ಮಗುರು ಶೇಕ್ ನಿಮ್ರ್ ಅಲ್-ನಿಮ್ರ್ ಸೇರಿಂದ ಭಯೋತ್ಪಾದನೆಗಾಗಿ ಒಂದೇ ದಿನ 50 ಮಂದಿಗೆ ಮರಣದಂಡನೆ ನೀಡಲಾಗಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin