ರಿಯಾಯಿತಿ ದರದಲ್ಲಿ ಎಲ್‍ಇಡಿ ಬಲ್ಬ್ ವಿತರಣೆ

ಈ ಸುದ್ದಿಯನ್ನು ಶೇರ್ ಮಾಡಿ

led--balp

ಸೂಲಿಬೆಲೆ, ಸೆ.6-ಪಟ್ಟಣದ ಬೆಸ್ಕಾಂ ಕಚೇರಿ ಆವರಣದಲ್ಲಿ ರಿಯಾಯಿತಿ ದರದಲ್ಲಿ ಎಲ್‍ಇಡಿ ಬಲ್ಬ್‍ಗಳನ್ನು ವಿತರಿಸಲಾಯಿತು.  ಸರ್ಕಾರದ ಹಾಗೂ ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ಎಲ್‍ಇಡಿ ಬಲ್ಬ್‍ಗಳನ್ನು ವಿತರಣೆ ಮಾಡಲಾಗುತ್ತಿದ್ದು ವಿದ್ಯುತ್ ಉಳಿತಾಯದ ದೃಷ್ಟಿಯಿಂದ ಪ್ರತಿಯೊಬ್ಬ ಗ್ರಾಹಕರು ಪಡೆದುಕೊಳ್ಳಬೇಕಾಗಿದೆ ಎಂದು ಸಹಾಯಕ ಎಂಜಿನಿಯರ್ ಅನಿಲ್‍ಕುಮಾರ್ ತಿಳಿಸಿದರು. ಈ ಎಲ್‍ಇಡಿ ಬಲ್ಬ್‍ಗಳ ಬಳಕೆಯಿಂದ ಶೇ.80ರಷ್ಟು ವಿದ್ಯುತ್ ಉಳಿತಾಯ ಮಾಡಬಹುದಾಗಿದ್ದು ಸರ್ಕಾರ ವಿದ್ಯುತ್ ಉಳಿತಾಯ ಮಾಡುವ ಉದ್ದೇಶದಿಂದ ಎಲ್‍ಇಡಿ ಬಲ್ಬ್‍ಗಳನ್ನು ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ವಿತರಣೆ ಮಾಡಲಾಗುತ್ತಿದೆ. ಪ್ರತಿ ಬಲ್ಬ್‍ಗೆ 80ರೂ ನಿಗದಿ ಪಡಿಸಿದ್ದು ಪ್ರತಿಯೊಬ್ಬ ಗ್ರಾಹಕರಿಗೆ 5, 10 ಬಲ್ಬ್‍ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.

ಮನೆಯ ವಿದ್ಯುತ್ ಬಿಲ್‍ಗೆ 5 ಬಲ್ಬ್‍ಗಳು, ಮತದಾರರ ಗುರ್ತಿನ ಚೀಟಿ ನೀಡಿ 10 ಬಲ್ಬ್‍ಗಳನ್ನು ಪಡೆಯಬಹುದಾಗಿದೆ. ಪ್ರತಿಯೊಬ್ಬ ಗ್ರಾಹಕರು ಎಲ್‍ಇಡಿ ಬಲ್ಬ್‍ಗಳನ್ನು ಖರೀದಿ ಮಾಡುವುದರ ಮೂಲಕ ಬಳಕೆ ಮಾಡಿ ವಿದ್ಯುತ್ ಉಳಿತಾಯಕ್ಕೆ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದರು.ಬೆಸ್ಕಾಂ ಕಿರಿಯ ಎಂಜಿನಿಯರ್ ಲಕ್ಷ್ಮಣ್‍ಗೌಡ, ಸಿಬ್ಬಂದಿಗಳಾದ ಶ್ರೀನಿವಾಸ್, ಬಾಬು, ಮುನೇಗೌಡ, ಕೆಂಪಣ್ಣ, ಸೇರಿದಂತೆ ಸಿಬ್ಬಂದಿ ವರ್ಗ ಹಾಜರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin