ರಿಯೊ ಒಲಿಂಪಿಕ್ಸ್‍ನಲ್ಲಿ ತಾಯಿ- ಮಗನ ಜುಗಲ್‍ಬಂದಿ

ಈ ಸುದ್ದಿಯನ್ನು ಶೇರ್ ಮಾಡಿ

rio

ರಿಯೊ, ಆ. 7-  ಪ್ರಸಕ್ತ ಒಲಿಂಪಿಕ್ಸ್‍ನ ಆರಂಭದ ದಿನದಲ್ಲೇ ಅನೇಕ ದಾಖಲೆಗಳು ನಿರ್ಮಾಣವಾಗಿವೆ. ಇನ್ನೂ ಹಲವು ದಾಖಲೆಗಳೇ ನಿರ್ಮಿಸಲು ಅಥ್ಲೀಟ್‍ಗಳು ತವಕಿಸುತ್ತಿರುವಾಗಲೇ  ಈ ಬಾರಿಯ ಒಲಿಂಪಿಕ್ಸ್ ನಲ್ಲಿ ತಾಯಿ ಹಾಗೂ ಮಗ  ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.  ಇದುವರೆಗೂ ನಡೆದ  ಒಲಿಂಪಿಕ್ಸ್‍ನಲ್ಲೇ ತಾಯಿ- ಮಗನ ಜೋಡಿ ಕಾಣಿಸಿಕೊಂಡಿರಲಿಲ್ಲ ಆದರೆ  ಜಿಯೋರ್ಜಿಯನ್ ದೇಶದ ನಿನೋ ಸಾಲ್ಯೂಕ್‍ವಾಡ್ (47) ಹಾಗೂ ಓಲ್ಡ್ ಸ್ಟೋನ್ ಮಾಕಾವಲೈನಿ(18) ಅವರು ಒಟ್ಟಿಗೆ ಅದೂ 10 ಮೀಟರ್  ಏರ್ ಪಿಸ್ತೂಲ್ ವಿಭಾಗದಲ್ಲಿ ಕಾಣಿಸಿಕೊಂಡಿರುವುದು ದಾಖಲೆ ಸರಿ. ಸುದ್ದಿಗಾರರೊಂದಿಗೆ ಮಾತನಾಡಿದ  ನಿನೋ ಸಾಲ್ಯೂಕ್‍ವಾಡ್, ನಾನು ಒಲಿಂಪಿಕ್ಸ್‍ನಲ್ಲಿ ಇದುವರೆಗೂ  8 ಬಾರಿ ಪಾಲ್ಗೊಂಡಿದ್ದು ಮೂರು ಬಾರಿ ದೇಶಕ್ಕೆ ಪದಕವನ್ನು ಗೆದ್ದುಕೊಟ್ಟಿದ್ದೇನೆ. ಆದರೆ ಈ  ರಿಯೊ ಒಲಿಂಪಿಕ್ಸ್‍ನಲ್ಲಿ ನನ್ನ ಮಗನೊಂದಿಗೆ ಪಾಲ್ಗೊಳ್ಳುತ್ತಿರುವುದು ನಿಜಕ್ಕೂ ಸಂತಸದಾಯಕವಾಗಿದೆ ಎಂದರು.

ನನ್ನ ಮಗ ಓಲ್ಡ್ ಸ್ಟೋನ್ ಮಾಕಾವಲೈನಿಗೆ ನಾನೇ ಮೆಂಟರ್ ಹಾಗೂ ತರಬೇತುದಾರರನಾಗಿದ್ದು ಈ ಬಾರಿ ಅವನು ಒಲಿಂಪಿಕ್ಸ್‍ನಲ್ಲಿ ಪ್ರತಿನಿಧಿಸುತ್ತಿರುವುದರಿಂದ  ನಾನು ನರ್ವಸ್ ಆಗಿದ್ದೇನೆ ಎಂದರು.   ಒಲಿಂಪಿಕ್ಸ್‍ನಲ್ಲಿ  ಗಣನೀಯ ಸಾಧನೆ  ಮಾಡಿರುವ ನಿನೋ ಸಾಲ್ಯೂಕ್‍ವಾಡ್ 1998ರಲ್ಲಿ ನಡೆದ ಒಲಿಂಪಿಕ್ಸ್‍ನಲ್ಲಿ 25 ಮೀಟರ್ ಪಿಸ್ತೂಲ್‍ನಲ್ಲಿ ಚಿನ್ನದ ಪದಕ, 10 ಮೀಟರ್ ಏರ್‍ಪಿಸ್ತೂಲ್‍ನಲ್ಲಿ ಬೆಳ್ಳಿ ಪದಕ , ಹಾಗೂ 2008ರಲ್ಲಿ ನಡೆದ ಬೀಜಿಂಗ್ ಒಲಿಂಪಿಕ್ಸ್‍ನ 10 ಮೀಟರ್  ಏರ್ ಪಿಸ್ತೂಲ್‍ನಲ್ಲಿ ಕಂಚಿನ ಪದಕಗಳನ್ನು  ಜಿಯೋರ್ಜಿಯಾ ದೇಶಕ್ಕೆ  ಗೆದ್ದು ಕೊಟ್ಟಿದ್ದಾರೆ.  ಅಲ್ಲದೆ ನಿನೋ ಸಾಲ್ಯೂಕ್‍ವಾಡ್ ಬಾರ್ಸಿಲೋನಾ, ಸಿಡ್ನಿ , ಅಥೆನ್ಸ್ ಮತ್ತು ಲಂಡನ್‍ನಲ್ಲಿ ನಡೆದ ಒಲಿಂಪಿಕ್ಸ್ ನಲ್ಲೂ ಪಾಲ್ಗೊಂಡಿದ್ದು  ಒಟ್ಟು 8 ಒಲಿಂಪಿಕ್ಸ್‍ನಲ್ಲಿ ಪಾಲ್ಗೊಳ್ಳುವ ಮೂಲಕ ಇಂತಹ ಸಾಧನೆ ಮಾಡಿದ 2ನೆ ಅಥ್ಲೀಟ್ಸ್ ಎಂದು ಗುರುತಿಸಿಕೊಂಡಿದ್ದಾರೆ.  ಓಲ್ಡ್ ಸ್ಟೋನ್ ಮಾಕಾವಲೈನಿ ಮಾತನಾಡಿ,  ಈ ಬಾರಿಯ ಒಲಿಂಪಿಕ್ಸ್‍ನಲ್ಲಿ ಪದಕ  ಗೆಲ್ಲುವ ಮೂಲಕ ತನ್ನ ತಾಯಿಯ ಕನಸನ್ನು ನಸು ಮಾಡುತ್ತೇನೆ ಎಂದು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin