ರಿಯೋ ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಕ್ಯಾನ್ಸರ್ ಪೇಷಂಟ್

ಈ ಸುದ್ದಿಯನ್ನು ಶೇರ್ ಮಾಡಿ

Cance-r

ರಿಯೊ ಡಿ ಜನೈರೋ, ಆ.17-ಸಾಧನೆಗೆ ರೋಗರುಜಿನ ಅಡ್ಡಿಯಾಗದು. ಇದಕ್ಕೊಂದು ಸ್ಪಷ್ಟ ನಿದರ್ಶನವಾಗಿದ್ದಾರೆ ರಿಯೋ ಒಲಂಪಿಕ್ಸ್ ನಾವಿಕ ಅರ್ಜೈಂಟಿನಾದ ಹೆಲ್ಮ್ಸ್ಮ್ಯಾನ್ ಸಾಂಟಿಯಾಂಗೊ ಲಾಂಗೆ.  ಒಲಂಪಿಕ್ ಕ್ರೀಡಾಕೂಟದ ಭಾಗವಾಗಿ ಪಾವೊ ಡಿ ಅಕುಕರ್ನ ಗೌನಾಬಾರಾ ಕೊಲ್ಲಿಯಲ್ಲಿ ಮಿಶ್ರ ಕಾಟಾಮಾರನ್ ದೋಣಿ ಸ್ಪರ್ಧೆಯಲ್ಲಿ ಲಾಂಗೆ ಮತ್ತು ಸಿಸಿಲಿಯಾ ಕ್ಯಾರಾಂಜಾ ಸರೊಲಿ ಚಿನ್ನದ ಪದಕ ಗೆದ್ದರು.  ಒಲಂಪಿಕ್ ಸ್ಪರ್ಧೆಯ ಜಲಕ್ರೀಡೆ ವಿಭಾಗದಲ್ಲಿ ಅತ್ಯಂತ ಹಿರಿಯ ನಾವಿಕನಾದ 54 ವರ್ಷದ ಲಾಂಗೆ ಶ್ವಾಸಕೋಶ ಕ್ಯಾನ್ಸರ್ ರೋಗದಿಂದ ಬದುಕುಳಿದಿದ್ದಾರೆ. ತಮ್ಮ ದೌರ್ಬಲ್ಯವನ್ನು ಛಲದಿಂದ ಮೆಟ್ಟಿ ನಿಂತ ಲಾಂಗೆ ತನ್ನ ತಂಡದ ಜೊತೆಗಾರ್ತಿ ನೆರವಿನಿಂದ ಫೈನಲ್ನಲ್ಲಿ ಉತ್ತಮ ಪ್ರದರ್ಶನ ತೋರಿದರು.

► Follow us on –  Facebook / Twitter  / Google+

 

Facebook Comments

Sri Raghav

Admin